ತುಮಕೂರು:ಜಿಲ್ಲೆಯ ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಣ ಭೀತಿ ಹುಟ್ಟಿಸಿರುವ ನರಭಕ್ಷಕ ಚಿರತೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.
ನರಭಕ್ಷಕ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ: ಆನೆಗಳ ಮೂಲಕ ಕೂಂಬಿಂಗ್ - ತುಮಕೂರ ಎಲಿಫೆಂಟ್ ಕೂಂಬಿಂಗ್ ಗೆ ಚಾಲನೆ
ತುಮಕೂರು ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಣ ಭೀತಿ ಹುಟ್ಟಿಸಿರುವ ನರಭಕ್ಷಕ ಚಿರತೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭವಾಗಿದೆ.

ನರಭಕ್ಷಕ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ
ನರಭಕ್ಷಕ ಚಿರತೆ ಸೆರೆಗೆ ಎಲಿಫೆಂಟ್ ಕೂಂಬಿಂಗ್ಗೆ ಚಾಲನೆ ನೀಡಲಾಗಿದೆ. ತುಮಕೂರು ತಾಲೂಕಿನ ಹೆಬ್ಬೂರು, ಬೈಚೇನಹಳ್ಳಿ, ಚಿಕ್ಕಣ್ಣಸ್ವಾಮಿ ಟೆಂಪಲ್ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಮೂಲಕ ಕೂಂಬಿಂಗ್ ಮಾಡಲಾಗುತ್ತಿದೆ.
ನರಭಕ್ಷಕ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ
ಬೆಳಗ್ಗೆ 11 ಗಂಟೆಯಿಂದ ಆಭವಾಗಿರುವ ಎಲಿಫೆಂಟ್ ಕೂಂಬಿಂಗ್ನಲ್ಲಿ ನಾಗರಹೊಳೆಯಿಂದ ಬಂದಿರುವ ಎರಡು ಆನೆಗಳನ್ನು ಬಳಸಿಕೊಳ್ಳಲಾಗಿದೆ. ಕೃಷ್ಣ ಮತ್ತು ಗಣೇಶ ಎಂಬ ಹೆಸರಿನ ಆನೆಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.