ತುಮಕೂರು:ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಆಲ್ಬೂರು ಗ್ರಾಮದಲ್ಲಿ ನಡೆದಿದೆ.
ಕೆಳಗೆ ಬಿದ್ದ ವಿದ್ಯುತ್ ತಂತಿ ತುಳಿದ ರೈತ ಸ್ಥಳದಲ್ಲೇ ಸಾವು.. ಪ್ರಾಣ ಹೋದ ಮೇಲೆ ಬಂದ ಲೈನ್‌ಮನ್ - ತಿಪಟೂರು
ಗದ್ದೆಗೆ ನೀರು ಹಾಯಿಸಲು ತೆರಳುತ್ತಿದ್ದ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದಿದ್ದು ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರೈತ ಸಾವು
ಆಲ್ಬೂರಿನ ಕೃಷ್ಣೇಗೌಡ (50) ಮೃತ ದುರ್ದೈವಿ. ಗದ್ದೆಗೆ ನೀರು ಹಾಯಿಸಲು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಕೃಷ್ಣೇಗೌಡ ಅಸುನೀಗಿದ್ದಾರೆ.
ಪಕ್ಕದ ಗದ್ದೆಯ ರೈತನೊಬ್ಬ ವಿದ್ಯುತ್ ಲೈನ್ ಕಟ್ ಆಗಿರುವುದು ತಿಳಿದು ನೊಣವಿನಕೆರೆ ಬೆಸ್ಕಾಂ ಕಚೇರಿಗೆ ಕರೆ ಮಾಡಿದ್ದಾರೆ. ಲೈನ್ಮೆನ್ ಸ್ಥಳಕ್ಕೆ ಬಂದಾಗ ಕೃಷ್ಣೇಗೌಡ ವಿದ್ಯುತ್ ತಂತಿ ತಗುಲಿ ಮೃತಪಟ್ಟ ವಿಷಯ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.