ತುಮಕೂರು: ನಗರದಲ್ಲಿ ಉತ್ತರ ಪ್ರದೇಶ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಬಿಜೆಪಿ ಚಿಹ್ನೆ ಇದ್ದ ಬೈಕೊಂದನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ವಶಕ್ಕೆ ಪಡೆದಿದ್ದಾರೆ.
ಇಂದು ತುಮಕೂರಿನ ಬಿಜೆಪಿಯ ಪಕ್ಷದ ಪ್ರಚಾರ ಕಾರ್ಯಾಲಯ ಉದ್ಘಾಟನಾ ಸಂದರ್ಭದಲ್ಲಿ ಬಿಜೆಪಿ ಚಿಹ್ನೆ ಹೊಂದಿದ ಬೈಕ್ ಅದಾಗಿತ್ತು. UP80,DX5584 ನಂಬರಿನ ಬೈಕ್ ಇದಾಗಿದ್ದು, ಪಕ್ಷದ ಕಾರ್ಯಕರ್ತರೊಬ್ಬರು ತಂದಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಚುನಾವಣಾ ಆಯೋಗ ನೀತಿ ಸಂಹಿತೆ ಉಲ್ಲಂಘನೆ ಕುರಿತು ಆ್ಯಪ್ಗೆ ದೂರು ನೀಡಿದ್ದರು.