ಕರ್ನಾಟಕ

karnataka

ETV Bharat / state

ಚುನಾವಣಾ ಅಕ್ರಮ ತಡೆಗೆ ಅಧಿಕಾರಿಗಳು ಮೊಕ್ಕಾಂ... ಮುಕ್ತವಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆ! - ಪೊಲೀಸ್

ಹಿರಿಯ ಐಎಎಸ್ ಅಧಿಕಾರಿ ಡಾ. ಬಿಜಯ್ ಕೇತನ್ ಉಪಾಧ್ಯಾಯ ಅವರನ್ನು ಸಾಮಾನ್ಯ ವೀಕ್ಷಕರನ್ನಾಗಿ-ಹಿರಿಯ ಐಆರ್​ಎಸ್ ಅಧಿಕಾರಿ ವಿ ಎಸ್ ನೇಗಿ ಅವರನ್ನು ಚುನಾವಣಾ ವೆಚ್ಚ ಅಕ್ರಮ ತಡೆ ಅಧಿಕಾರಿಯಾಗಿ-ಪೊಲೀಸ್ ವೀಕ್ಷಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಜೋಷ್ ಮೋಹನ್ ಅವರನ್ನು ನೇಮಿಸಲಾಗಿದೆ.

ಚುನಾವಣಾ ಅಕ್ರಮ ತಡೆಗೆ ಅಧಿಕಾರಿಗಳ ನೇಮಕ

By

Published : Mar 31, 2019, 9:15 AM IST

Updated : Mar 31, 2019, 11:06 AM IST

ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸಾಮಾನ್ಯ ವೀಕ್ಷಕರು ಮತ್ತು ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರಾಗಿ ಹಿರಿಯ ಐಎಎಸ್, ಐಪಿಎಸ್ ಮತ್ತು ಐಆರ್​ಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗ ನೇಮಕ ಮಾಡಿದ್ದು ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ನೀಡಬಹುದಾಗಿದೆ.

ಹಿರಿಯ ಐಎಎಸ್ ಅಧಿಕಾರಿ ಡಾ. ಬಿಜಯ್ ಕೇತನ್ ಉಪಾಧ್ಯಾಯ ಅವರನ್ನು ಸಾಮಾನ್ಯ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಇವರ ಮೊಬೈಲ್ ನಂಬರ್ 6364248289 ಆಗಿದ್ದು, ಸಾರ್ವಜನಿಕರು ಚುನಾವಣಾ ಅಕ್ರಮದ ಬಗ್ಗೆ ಸಂಪರ್ಕಿಸಬಹುದಾಗಿದೆ.

ಹಿರಿಯ ಐಆರ್​ಎಸ್ ಅಧಿಕಾರಿ ವಿ ಎಸ್ ನೇಗಿ ಅವರನ್ನು ಚುನಾವಣಾ ವೆಚ್ಚ ಅಕ್ರಮ ತಡೆ ಅಧಿಕಾರಿಯಾಗಿಚುನಾವಣಾ ಆಯೋಗದಿಂದ ನೇಮಕ ಮಾಡಲಾಗಿದೆ. ಮೊಬೈಲ್ ನಂಬರ್ 6364368343 ಆಗಿದ್ದು ಸಾರ್ವಜನಿಕರು ಮುಕ್ತವಾಗಿ ಸಂಪರ್ಕಿಸಬಹುದಾಗಿದೆ.

ಪೊಲೀಸ್ ವೀಕ್ಷಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಜೋಷ್ ಮೋಹನ್ ಅವರನ್ನು ನೇಮಿಸಲಾಗಿದ್ದು ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಉಸ್ತುವಾರಿ ಹೊಂದಿರುತ್ತಾರೆ. ಮೊಬೈಲ್ ನಂಬರ್ 6364373542 ಆಗಿರುತ್ತದೆ.

ಸಾರ್ವಜನಿಕರು ಚುನಾವಣಾ ಅಕ್ರಮದ ಕುರಿತು ಯಾವುದೇ ಮಾಹಿತಿ ಇದ್ದಲ್ಲಿ ನೇರವಾಗಿ ಮೂವರು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

Last Updated : Mar 31, 2019, 11:06 AM IST

ABOUT THE AUTHOR

...view details