ತುಮಕೂರು: ಕಳೆದ 10 ದಿನಗಳಿಂದ ಶಿರಾದೆಡೆ ಮುಖಮಾಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಇಂದು ಮತ ಭೇಟೆ ಆರಂಭಿಸಿದರು.
ಶಿರಾ ಉಪಚುನಾವಣೆ.. ಮಾಜಿ ಪ್ರಧಾನಿ ದೇವೇಗೌಡರಿಂದ ಮತ ಬೇಟೆ - shira latest news
ಶಿರಾ ಪಟ್ಟಣದಲ್ಲಿರುವ ಸಮುದಾಯವೊಂದರ ಜನರು ವಾಸಿಸುವಂತಹ ಬಡಾವಣೆಗಳಲ್ಲಿ ಜೆಡಿಎಸ್ ಪರವಾಗಿ ಅಪಾರ ವಿಶ್ವಾಸವಿದೆ..
ಶಿರಾ ಉಪಚುನಾವಣೆ: ಮಾಜಿ ಪ್ರಧಾನಿ ದೇವೇಗೌಡರಿಂದ ಮತ ಬೇಟೆ
ಶಿರಾ ಪಟ್ಟಣದ ಖರಾದಿ ಮೊಹಲ್ಲಾದಲ್ಲಿ ನಡೆದ ಸಮುದಾಯವೊಂದರ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ಕಡೂರಿನ ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ, ಶಿರಾ ಪಟ್ಟಣದಲ್ಲಿರುವ ಸಮುದಾಯವೊಂದರ ಜನರು ವಾಸಿಸುವಂತಹ ಬಡಾವಣೆಗಳಲ್ಲಿ ಜೆಡಿಎಸ್ ಪರವಾಗಿ ಅಪಾರ ವಿಶ್ವಾಸವಿದೆ.
ದೇವೇಗೌಡರು ಆಗಮಿಸಿದ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜನ ಭಾಗವಹಿಸುತ್ತಿರುವುದು ಇದಕ್ಕೆ ನಿದರ್ಶನ ಎಂದು ಹೇಳಿದರು. ಅಲ್ಲದೇ, ಈ ಬಾರಿ ಜೆಡಿಎಸ್ ಅಭ್ಯರ್ಥಿ ಪರವಾಗಿ ನಿಲ್ಲಲು ಸಮುದಾಯವೊಂದರ ಜನ ನಿಶ್ಚಯಿಸಿದ್ದಾರೆ ಎಂದು ಹೇಳಿದರು.
Last Updated : Oct 31, 2020, 8:00 PM IST