ತುಮಕೂರು:ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಚಾಂದಿನಿ ಮೆರವಣಿಗೆ ನಡೆಸಿದರು.
ತುಮಕೂರಲ್ಲಿ ಈದ್ ಮಿಲಾದ್ ಆಚರಣೆ... ಚಾಂದಿನಿ ಮೆರವಣಿಗೆ - ತುಮಕೂರು ಈದ್ ಮಿಲಾದ್ ಸಂಭ್ರಮ
ತುಮಕೂರಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಆಚರಿಸಿದರು. ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಲ್ಲಿ ಚಾಂದಿನಿ ಮೆರವಣಿಗೆ ನಡೆಯಿತು.
ತುಮಕೂರಲ್ಲಿ ಈದ್ ಮಿಲಾದ್ ಆಚರಣೆ
ನಗರದ ಈದ್ಗಾ ಮೈದಾನದಿಂದ ಬನಶಂಕರಿ, ಕಾಲ್ಟೆಕ್ಸ್, ಬಿ.ಜಿ.ಪಾಳ್ಯ ಸರ್ಕಲ್, ನಜರಾಬಾದ್ ಪುರಸ್ ಕಾಲೋನಿ, ಟೌನ್ ಹಾಲ್ ಮುಂತಾದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿತು. ಮುಸ್ಲಿಂರು ಮೆಕ್ಕಾ, ಮಸೀದಿಗಳ ಆಕಾರವನ್ನು ಸೃಷ್ಟಿಸುವ ಮೂಲಕ ಅಲ್ಲಾಹುವನ್ನು ಜಪಿಸುತ್ತ, ಸ್ತುತಿಗಳನ್ನು ಪಠಿಸುತ್ತ ಸಂಭ್ರಮದಿಂದ ಈದ್ ಮಿಲಾದ್ ಆಚರಿಸಿದರು.
ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.