ಪಾವಗಡ( ತುಮಕೂರು) :ಪಟ್ಟಣದಲ್ಲಿ ಅನಾವಶ್ಯಕವಾಗಿ ಓಡಾಡುವ ಜನತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಡ್ರೋನ್ ಕ್ಯಾಮೆರಾ ಹಾರಾಟಕ್ಕೆ ಮದುಗಿರಿ ಡಿವೈಎಸ್ಪಿ ಪ್ರವೀಣ್ ಚಾಲನೆ ನೀಡಿದರು.
ಅನಾವಶ್ಯಕ ಓಡಾಡುವವರೇ ಎಚ್ಚರ.. ನಿವೀಗ ಡ್ರೋನ್ ಕ್ಯಾಮೆರಾ ಕಣ್ಗಾವಲಿನಲ್ಲಿದ್ದೀರಿ..
ಡ್ರೋನ್ ಕ್ಯಾಮೆರಾ ಹಾರಾಟದಿಂದ ಜನತೆ ಗುಂಪು ಗೂಡುವುದನ್ನು ಚದುರಿಸುವ ಹಾಗೂ ಸುಖಾಸುಮ್ಮನೆ ಓಡಾಡುವ ಜನರನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ವಿನಾಕಾರಣ ಸಂಚರಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಮಧುಗಿರಿ ಡಿವೈಎಸ್ಪಿ ಪ್ರವೀಣ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆ ಲಾಕ್ಡೌನ್ ವಿಧಿಸಿದರೂ ಜನತೆ ಜಾಗೃತರಾಗದೇ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಡ್ರೋನ್ ಕ್ಯಾಮೆರಾ ಹಾರಾಟಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರದ ಆದೇಶ ಎಷ್ಟು ದಿನಗಳವರೆಗೂ ಇರಲಿದೆಯೋ ಅಲ್ಲಿಯವರೆಗೂ ಕೊರೊನಾ ನಿವಾರಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ದವಿದೆ ಎಂದರು.