ತುಮಕೂರು:ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂಬ ಶಾಸಕ ಜಮೀರ್ ಅಹ್ಮದ್ ಅವರ ಹೇಳಿಕೆ ಬಗ್ಗೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅದು ಜಮೀರ್ ಅವರ ವೈಯುಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯನವರು ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ತೀರ್ಮಾನವೇ ಅಂತಿಮ ಎಂದರು.
ನಮ್ಮ ಜೊತೆಗಿರುವ ಬೆಂಬಲಿಗರಿಗೆ ನಮ್ಮ ನಾಯಕರು ಹೀಗೆ ಆಗ್ಬೇಕು, ಹಾಗೆ ಆಗ್ಬೇಕು ಎಂಬ ಆಸೆಗಳಿರುತ್ತವೆ. ಜಮೀರ್ ಸಿದ್ದರಾಮಯ್ಯನವರ ಜೊತೆಗಿರುವುದರಿಂದ ಅವರಿಗೆ ಹಲವು ಆಸೆಗಳಿರಬಹುದು. ನನ್ನ ಬೆಂಬಲಿಗರಿಗೆ ನಾನು ಸಿಎಂ ಆಗ್ಬೇಕೆಂಬ ಆಸೆ ಇರಬಹುದು. ಆದರೆ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರತಿಯೊಬ್ಬ ಕಾರ್ಯಕರ್ತನ ಮೊದಲ ಆದ್ಯತೆಯಾಗಬೇಕು ಎಂದರು.