ತುಮಕೂರು: ರಾಜ್ಯದಲ್ಲಿ ಅನೇಕ ಮಂದಿ ಮುಖ್ಯಮಂತ್ರಿಗಳು ಆಗಿದ್ದಾರೆ. ಪರ್ಸೆಂಟೇಜ್ಗೆ ಸಂಬಂಧಪಟ್ಟಂತೆ ಕನಿಷ್ಠ ಐದಾರು ಮಂದಿ ಮಾಜಿ ಮುಖ್ಯಮಂತ್ರಿ ಗಳನ್ನು ಸೇರಿದಂತೆ ಆಯೋಗವನ್ನು ರಚಿಸಿ ತನಿಖೆ ಮಾಡಿದರೆ ಒಳ್ಳೆಯದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಪ್ರಧಾನಿಗಳಿಗೆ ಪತ್ರ ಬರೆದಿದ್ದು, ಈ ಬಗ್ಗೆ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ ಎಂದು ಹೇಳಿದರು.
ಪರ್ಸೆಂಟೇಜ್ಗೆ ಸಂಬಂಧಪಟ್ಟಂತೆ ಆಯೋಗ ರಚಿಸಿ ತನಿಖೆ ಮಾಡಿದರೆ ಒಳ್ಳೆಯದು: ಡಾ.ಜಿ.ಪರಮೇಶ್ವರ್ - ಪರ್ಸೆಂಟೇಜ್ಗೆ ಸಂಬಂಧಪಟ್ಟಂತೆ ಆಯೋಗ ರಚಿಸಿ ತನಿಖೆಗೆ ಒತ್ತಾಯಿಸಿದ ಜಿ. ಪರಮೇಶ್ವರ್
ಯಾರ್ಯಾರ ಸರ್ಕಾರದಲ್ಲಿ ಎಷ್ಟೆಷ್ಟು ಪರ್ಸೆಂಟ್ ಕಮಿಷನ್ ಇತ್ತು ಎಂಬುದು ಬಹಿರಂಗವಾಗಲಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
ಡಾ. ಜಿ ಪರಮೇಶ್ವರ್