ಕರ್ನಾಟಕ

karnataka

ETV Bharat / state

ಬಿಜೆಪಿ ವಿಷಯವನ್ನು ಸೆನ್ಸಿಟೈಸ್ ಮಾಡಿ ಅದರಿಂದಲೇ ಲಾಭ ಪಡೆಯುತ್ತೆ: ಡಾ. ಜಿ ಪರಮೇಶ್ವರ್ ಆರೋಪ - ಬಿಜೆಪಿ ವಿರುದ್ದ ಜಿ. ಪರಮೇಶ್ವರ್ ಆಕ್ರೋಶ

ರಾಮ ಮಂದಿರ ಕಟ್ಟುತ್ತೇವೆ ಎಂದು ದೇಶಾದ್ಯಂತ ಸಾವಿರಾರು ಕೋಟಿ ರೂ. ಸಂಗ್ರಹಿಸಿದ್ದಾರೆ. ಈಗಲೂ ಕೂಡ ಸಂಗ್ರಹಿಸುತ್ತಲೇ ಇದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

dr-g-parameshwar
ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

By

Published : Oct 14, 2021, 8:02 PM IST

ತುಮಕೂರು: ಜನರ ಭಾವನೆಗಳೊಂದಿಗೆ ಬಿಜೆಪಿಯವರು ಆಟವಾಡುತ್ತಾರೆ. ವಿಷಯವನ್ನು ಸೆನ್ಸಿಟೈಸ್ ಮಾಡಿ ಅದರಿಂದಲೇ ಲಾಭ ಪಡೆಯುತ್ತಾರೆ. ಒಮ್ಮೆ ರಾಮ ಬರುತ್ತಾನೆ. ಒಮ್ಮೆ ಭೀಮ ಬರುತ್ತಾನೆ. ಮತ್ತೊಮ್ಮೆ ಲಕ್ಷ್ಮಣ ಬರುತ್ತಾನೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್

ಜಿಲ್ಲೆಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ರಾಮ ಮಂದಿರ ಕಟ್ಟಲು ಇಷ್ಟೊಂದು ವರ್ಷ ಬೇಕಾಗಿರಲಿಲ್ಲ. ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಎಂದು ತುಮಕೂರಿನಿಂದಲೂ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಅದನ್ನು ಮಾರ್ಗಮಧ್ಯೆದಲ್ಲಿಯೇ ಬಿಸಾಕಿ ಹೋಗಿದ್ದಾರೆ ಎಂದು ಆರೋಪಿಸಿದರು.

ರಾಮ ಮಂದಿರ ಕಟ್ಟುತ್ತೇವೆ ಎಂದು ದೇಶಾದ್ಯಂತ ಸಾವಿರಾರು ಕೋಟಿ ರೂ. ಸಂಗ್ರಹಿಸಿದ್ದಾರೆ. ಈಗಲೂ ಕೂಡ ಸಂಗ್ರಹಿಸುತ್ತಲೇ ಇದ್ದಾರೆ. ನಾನು ಕೂಡ 10 ಸಾವಿರ ರೂ. ರಾಮ ಮಂದಿರ ಕಟ್ಟಲು ನೀಡಿದ್ದೇನೆ. ನಾವು ಕೂಡ ರಾಮಭಕ್ತ. ಮಾಜಿ ಶಾಸಕ ಶಫಿ ಅಹಮದ್ ಕೂಡ ರಾಮಮಂದಿರ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಜಾತ್ಯತೀತ ಮನೋಭಾವ ಹೊಂದಿರುವ ನಾವು ಕಾಂಗ್ರೆಸ್​ನವರು. ನಾವು ಕೂಡ ರಾಮ ಮಂದಿರ ಕಟ್ಟಲು ಹಣ ನೀಡಿದ್ದೇವೆ. ನಮ್ಮ ಹಣ ತೆಗೆದುಕೊಂಡು ಹೋಗಿ ಏನು ಮಾಡಿದ್ದಾರೆ? ಎಂಬುದು ಪ್ರಶ್ನೆಯಾಗಿದೆ. ಅದರ ಲೆಕ್ಕವನ್ನು ಬಿಜೆಪಿ ಕೊಡಬೇಕಿದೆ ಎಂದು ಆಗ್ರಹಿಸಿದರು.

ಮುಂದಿನ ಲೋಕಸಭೆ ಚುನಾವಣೆ ಬರುವವರೆಗೂ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಕಲ್ಲು ಕೆಲಸ, ಸಿಮೆಂಟ್ ಕೆಲಸ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.

ಓದಿ:ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಮುಹೂರ್ತ ಫಿಕ್ಸ್​: ನ.21 ರಂದು ಚುನಾವಣೆ ನಿಗದಿ

ABOUT THE AUTHOR

...view details