ತುಮಕೂರು:ನಿಯಮಬದ್ಧವಾಗಿ ಜಿಎಸ್ಟಿ ಪಾಲನೆ ಮಾಡಿದರೆ ಯಾವುದೇ ರೀತಿಯ ಗೊಂದಲಗಳು ಇರುವುದಿಲ್ಲ ಎಂದು ಜಿಎಸ್ಟಿ ಜಂಟಿ ಆಯುಕ್ತ ಕೆ.ಎಸ್.ಬಸವರಾಜು ಹೇಳಿದರು.
ಜಿಎಸ್ಟಿ ಬಗ್ಗೆ ಆತಂಕ ಬೇಡ: ನಿಯಮಬದ್ಧವಾಗಿ ಪಾಲನೆ ಮಾಡಿ - etv bharat
ಜಿಎಸ್ಟಿ ಬಗ್ಗೆ ಆತಂಕ ಬೇಡ. ಎಲ್ಲರೂ ನಿಯಮಬದ್ಧವಾಗಿ ಜಿಎಸ್ಟಿ ಪಾಲನೆ ಮಾಡಿ ಎಂದು ಜಿಎಸ್ಟಿ ಜಂಟಿ ಆಯುಕ್ತ ಕೆ.ಎಸ್.ಬಸವರಾಜು ಹೇಳಿದರು.
![ಜಿಎಸ್ಟಿ ಬಗ್ಗೆ ಆತಂಕ ಬೇಡ: ನಿಯಮಬದ್ಧವಾಗಿ ಪಾಲನೆ ಮಾಡಿ](https://etvbharatimages.akamaized.net/etvbharat/prod-images/768-512-4230703-thumbnail-3x2-surya.jpeg)
ನಿಯಮಬದ್ಧವಾಗಿ ಜಿಎಸ್ ಟಿ ಪಾಲನೆ ಮಾಡಿ
ಇಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಎಸ್ಟಿ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ರೀತಿಯ ಗೊಂದಲಗಳು ಆಗದಂತೆ ಇದನ್ನು ರೂಪಿಸಲಾಗಿದೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ತೆರಿಗೆ ಸಲಹೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ನಿಯಮಬದ್ಧವಾಗಿ ಜಿಎಸ್ಟಿ ಪಾಲನೆ ಮಾಡಿ
ಇದೆ ವೇಳೆ ವಾರ್ಷಿಕ ರಿಟರ್ನ್ಸ್ GSTR-9 ಅಪ್ಲೋಡ್ ಮಾಡುವ ಸಮಸ್ಯೆ ಎದುರಿಸುತ್ತಿರುವವರಿಗೆ ಇದರ ಬಗ್ಗೆ ಪ್ರಾಯೋಗಿಕವಾಗಿ ಹೇಳಿಕೊಡಲಾಯಿತು. ಇನ್ನು ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ತೆರಿಗೆ ಸಲಹೆಗಾರರು ಮತ್ತು ವ್ಯಾಪಾರಸ್ಥರು ಭಾಗವಹಿಸಿದ್ದರು.