ತುಮಕೂರು/ಪಾವಗಡ:ಮೂಲಸೌಕರ್ಯಗಳಿಂದ ವಂಚಿತವಾಗಿ ಸದಾ ಬರದ ತಾಲೂಕು, ನಕ್ಸ್‌ಲೈಟ್ ಪ್ರದೇಶವೆಂದೇ ಹಣೆಪಟ್ಟಿ ಕಟ್ಟಿಕೊಂಡ ಪಾವಗಡದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಸಿಕೃಷ್ಣ ವಾಸ್ತವ್ಯ ಹೂಡಿ ಪೊಲೀಸರು ಮತ್ತು ಜನರ ನಡುವೆ ಜನಸ್ನೇಹಿ ವಾತಾವರಣ ಮೂಡಿಸಿದರು.
ಗ್ರಾಮವಾಸ್ತವ್ಯ ಮಾಡಿ ಜನಸ್ನೇಹಿ ವಾತಾವರಣ ಮೂಡಿಸಿದ ಎಸ್ಪಿ ಡಾ.ಕೆ ವಂಶಿಕೃಷ್ಣ.. - ತುಮಕೂರು ಜಿಲ್ಲೆಯ ಪಾವಗಡ
ಶುಕ್ರವಾರ ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಮದಲ್ಲಿ ಕುಂದು ಕೊರತೆ ಸಭೆ ನಡೆಸಿ ಮಾತನಾಡಿದ ಅವರು, ಪೊಲೀಸರೆಂದರೆ ಭಯ ಇರಬಾರದರು. ಪ್ರೀತಿ ಮತ್ತು ಗೌರವ ಇರಬೇಕು. ಗ್ರಾಮಗಳಲ್ಲಿ ನಡೆಯುವ ಅವ್ಯವಹಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರನ್ನು ಪ್ರೀತಿಯಿಂದ ಕಾಣಬೇಕು ಎಂದರು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಆ ಮೂಲಕ ಯುವಜನತೆ ತಮ್ಮ ಗ್ರಾಮ ರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗಬೇಕು. ದುಶ್ಚಟಗಳಿಂದ ದೂರಾಗಿ, ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು. ನಂತರ ಸಭೆಯಲ್ಲಿ ಜನರ ಸಮಸ್ಯೆ ಆಲಿಸಿ ಪರಿಹಾರದ ಭರವಸೆ ನೀಡಿದರು. ಬಳಿಕ ಅಲ್ಲೇ ಗ್ರಾಮ ವಾಸ್ತವ್ಯ ಮಾಡಿದರು.