ತುಮಕೂರು: ಕೊರೊನಾ ಸೋಂಕಿಗೆ ಯಾರೂ ಕೂಡ ಭಯಪಡಬೇಕಾದ ಅಗತ್ಯವಿಲ್ಲ ಎಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವವರು ರಾಜ್ಯದ ಜನತೆಗೆ ಧೈರ್ಯ ತುಂಬಿದ್ದಾರೆ.
ಕೊರೊನಾ ಸೋಂಕಿಗೆ ಭಯ ಪಡಬೇಡಿ: ಗುಣಮುಖರಾಗಿ ಜನತೆಗೆ ಆತ್ಮಸ್ಥೈರ್ಯ ತುಂಬಿದರು - ತುಮಕೂರು ಕೊರೊನಾ ಸುದ್ದಿ
ಯಾರೂ ಕೂಡ ಕೊರೊನಾ ಸೋಂಕಿಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದು ತುಮಕೂರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವವರು ಜನತೆಗೆ ಧೈರ್ಯ ತುಂಬಿದ್ದಾರೆ. ಕೊರೊನಾ ಬಂದ್ರೆ ಆತಂಕ ಪಡಬೇಡಿ ಎಂದಿದ್ದಾರೆ.
ಕೊರೊನಾ ಸೋಂಕಿಗೆ ಭಯಪಡಬೇಡಿ: ಗುಣಮುಖರಾದವರ ಮನದಾಳದ ಮಾತು
ಈ ಕುರಿತು ಮಾತನಾಡಿದ ಅವರು ತುಮಕೂರು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ನಿತ್ಯ ಮಾತ್ರೆಗಳನ್ನು ಕೊಡುತ್ತಾರೆ. ಅಲ್ಲದೆ ಉತ್ತಮವಾದ ಊಟವನ್ನು ಕೊಟ್ಟಿದ್ದಾರೆ. ಈ ಮೂಲಕ ನಾವು ಗುಣಮುಖರಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಮಧುಗಿರಿ ಪಟ್ಟಣದ ನಿವಾಸಿಯಾಗಿದ್ದು, ಸಂಪೂರ್ಣ ಗುಣಮುಖನಾಗಿ ವಾಪಸ್ ಊರಿಗೆ ತೆರಳುತ್ತಿದ್ದೇನೆ. ನನ್ನೊಂದಿಗೆ ಮೂವರು ಕೂಡ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಯಾರೂ ಕೂಡ ಸೋಂಕಿಗೆ ಹೆದರಿಕೊಳ್ಳಬೇಡಿ. ಭಯಪಟ್ಟರೆ ತೊಂದರೆಯಾಗಲಿದೆ ಎಂದಿದ್ದಾರೆ.