ಕರ್ನಾಟಕ

karnataka

ETV Bharat / state

ಕುರಿಗಳ ಕೊಟ್ಟಿಗೆಯ ಮೇಲೆ ನಾಯಿ ದಾಳಿ: 11 ಕುರಿಮರಿಗಳ ಸಾವು - ಪಾವಗಡ

ಪಾವಗಡದಲ್ಲಿ ಕುರಿಗಳ ಕೊಟ್ಟಿಗೆಯ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿ 11 ಕುರಿಮರಿಗಳು ಸಾವನ್ನಪ್ಪಿದ  ಘಟನೆ  ತಾಲೂಕಿನ ರಾಜವಂತಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

11 ಕುರಿಮರಿಗಳ ಸಾವು

By

Published : Sep 13, 2019, 1:29 AM IST

ಪಾವಗಡ: ಕುರಿಗಳ ಕೊಟ್ಟಿಗೆಯ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿ 11 ಕುರಿಮರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ರಾಜವಂತಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.

ರಾಜವಂತಿ ಗ್ರಾಮದ ಕುರಿಗಾಹಿ ಕುಮಾರ್ ಎಂಬುವವರು ಜೀವನೋಪಾಯಕ್ಕಾಗಿ ಕುರಿಗಳನ್ನು ಸಾಕಿ ಜೀವನ ನಡೆಸುತ್ತಿದ್ದರು. ಇಂದು ಎಂದಿನಂತೆ ಕುರಿಗಳನ್ನು ಮೇಯಿಸಲು ಹೋಗಿ ಮರಿಗಳನ್ನು ಕೊಟ್ಟಿಗೆಯಲ್ಲಿ ಹಾಕಿ ಹೋಗಿದ್ದಾಗ ಸುಮಾರು 8 ನಾಯಿಗಳ ಗುಂಪು ಕುರಿಮರಿಗಳ ಕೊಟ್ಟಿಗೆಗೆ ನುಗ್ಗಿ ಮರಿಗಳನ್ನು ಕಚ್ಚಿ ತಿಂದಿವೆ.

ಕುರಿಗಳ ಕೋಟ್ಟಿಗೆಯ ಮೇಲೆ ನಾಯಿ ದಾಳಿ

ರಾಜವಂತಿ ಕೃಷಿ ಸಂಶೋಧನಾ ಕೇಂದ್ರದ ಸಮೀಪದಲ್ಲಿ ಫಾರಂ ಕೋಳಿ ಶೆಡ್ ಇದ್ದು, ಇಲ್ಲಿ ಸಾವನ್ನಪ್ಪುವ ಕೋಳಿಗಳನ್ನು ಪ್ರತಿದಿನ ನಾಯಿಗಳಿಗೆ ಹಾಕಲಾಗುತ್ತಿತ್ತು . ಇದರಿಂದ ನಾಯಿಗಳ ಕಾಟ ಜಾಸ್ತಿ ಆಗಿರುವ ಬಗ್ಗೆ ಜನತೆ ಕೋಳಿ ಫಾರಂ ಮಾಲೀಕರ ಗಮನಕ್ಕೆ ತಂದು ಸತ್ತ ಕೋಳಿಗಳನ್ನು ನಾಯಿಗಳಿಗೆ ಹಾಕದಂತೆ ತಿಳಿಹೇಳಲಾಗಿತ್ತು.

ಆದರೂ ಅದನ್ನೇ ಕೋಳಿ ಫಾರಂ ಮಾಲೀಕರು ಮುಂದುವರೆಸಿದ ಕಾರಣ ಇಂದು ಸತ್ತ ಕೋಳಿಗಳು ಸಿಗದೆ ಸಮೀಪದಲ್ಲಿ ಇದ್ದ ಕುರಿ ಕೊಟ್ಟಿಗೆಯ ಮೇಲೆ ದಾಳಿ ನಡೆಸಿ 11 ಕುರಿಮರಿಗಳನ್ನು ಕಚ್ಚಿ ತಿಂದಿವೆ ಎಂದು ಮಾಲೀಕ ಕುಮಾರ್ ತಿಳಿಸಿದ್ದಾರೆ.

ಘಟನೆಯ ಸಂಬಂಧ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸೂಕ್ತ ಪರಿಹಾರ ನೀಡಬೇಕೆಂದು ಮಾಲೀಕ ಕುಮಾರ್ ಒತ್ತಾಯಿಸಿದ್ದಾರೆ.

ABOUT THE AUTHOR

...view details