ತುಮಕೂರು :ಸೆಪ್ಟೆಂಬರ್ 15ರಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಮುಷ್ಕರ ಹಿನ್ನೆಲೆ ಈವರೆಗೂ ಜಿಲ್ಲೆಯ ವೈದ್ಯರು ಯಾವುದೇ ರೀತಿಯ ಲಿಖಿತ ವರದಿಯನ್ನು ಸಲ್ಲಿಸಿಲ್ಲ.
ಮುಷ್ಕರ ಸಂಬಂಧ ವೈದ್ಯರು ಯಾವುದೇ ಲಿಖಿತ ವರದಿ ನೀಡಿಲ್ಲ : ಡಿಹೆಚ್ಒ ಸ್ಪಷ್ಟನೆ - Tumkur District
ಸರ್ಕಾರಿ ವೈದ್ಯರ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಎಚ್ಚರಿಕೆ ನೀಡಲಾಗಿದೆ. ತುಮಕೂರಿನಲ್ಲಿ ಜಿಲ್ಲಾ ವೈದ್ಯರ ಸಂಘವು ಈ ಮುಷ್ಕರ ಕುರಿತು ಯಾವುದೇ ಲಿಖಿತ ವರದಿ ಸಲ್ಲಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಾಹಿತಿ ನೀಡಿದ್ದಾರೆ..
ಮುಷ್ಕರ ಸಂಬಂಧ ವೈದ್ಯರು ಯಾವುದೇ ಲಿಖಿತ ವರದಿ ನೀಡಿಲ್ಲ: ಡಿಹೆಚ್ಓ ಸ್ಪಷ್ಟನೆ
ಹೀಗಾಗಿ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಸೇರಿದಂತೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಕೋವಿಡ್-19 ಚಿಕಿತ್ಸಾ ಘಟಕದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ದೊರೆಯಲಿವೆ ಎಂದು ತಿಳಿಸಿದ್ದಾರೆ.