ತುಮಕೂರು:ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತನಿಖೆ ಸಂಬಂಧ ದೆಹಲಿಗೆ ಕರೆಸಿಕೊಂಡು ಇಡಿ ಅಧಿಕಾರಿಗಳು ನಾಲ್ಕು ದಿನ ಪ್ರಶ್ನೆ ಮಾಡಿ ನಂತರ ಏಕಾಏಕಿ ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಡಿಕೆಶಿ ದಿಢೀರ್ ಬಂಧನ ಸರಿಯಲ್ಲ: ಮಾಜಿ ಡಿಸಿಎಂ ಜಿ. ಪರಮೇಶ್ವರ್ ಆಕ್ರೋಶ - d.k.s. sudden arrest is not a good action
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತನಿಖೆ ಸಂಬಂಧ ದೆಹಲಿಗೆ ಕರೆಸಿಕೊಂಡು ಇಡಿಯವರು ನಾಲ್ಕು ದಿನ ಪ್ರಶ್ನೆ ಮಾಡಿ ನಂತರ ಏಕಾಏಕಿ ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಡಿ.ಕೆ.ಶಿ ಏಕಾಏಕಿ ಬಂಧನ ಸರಿಯಲ್ಲ ಎಂದ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್
ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಅವರ ಮೇಲೆ ಕ್ರಮ ಕೈಗೊಂಡರೆ ಪರವಾಗಿಲ್ಲ. ಆದರೆ, ಇದರಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಸ್ತಕ್ಷೇಪ ಇದ್ದರೆ ಅದು ಡಿಕೆಶಿ ಬಂಧನದ ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.