ತುಮಕೂರು:ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಹೋಲಿಕೆ ಮಾಡಿದರೆ 40 ವರ್ಷದಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಟಿ.ಬಿ ಜಯಚಂದ್ರ ರೆಡಿಮೇಡ್ ಗಂಡು ಇದ್ದಂಗೆ, ರಂಗನಾಥ್ ಸ್ವಾಮಿ ಇದ್ದಂಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಟಿ.ಬಿ ಜಯಚಂದ್ರ ರೆಡಿಮೇಡ್ ಗಂಡಿದ್ದಂತೆ: ಡಿ.ಕೆ ಶಿವಕುಮಾರ್ - DK Sivakumar
ಶಿರಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಚಾರ ನಡೆಸಿದರು.
ಇಂದು ದಿನವಿಡೀ ಶಿರಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಬಿರುಸಿನ ಪ್ರಚಾರ ನಡೆಸಿದ ಅವರು, ಟಿ.ಬಿ ಜಯಚಂದ್ರ ಅವರಂತೆ ಜೆಡಿಎಸ್ ಅಭ್ಯರ್ಥಿ ವಿಧಾನಸೌಧದಲ್ಲಿ ಒಂದು ದಿನವೂ ಮುಖ್ಯಮಂತ್ರಿ ಎದುರು ಮಾತನಾಡಲು ಆಗುತ್ತದೆಯೇ, ಬಿಜೆಪಿ ಅಭ್ಯರ್ಥಿ ಇದೀಗ ರಾಜಕೀಯ ನೋಡುತ್ತಿದ್ದಾರೆ. ಹೀಗಾಗಿ ಅಪಾರ ಅನುಭವ ಹೊಂದಿರುವ ಟಿ.ಬಿ ಜಯಚಂದ್ರ ಅವರಿಗೆ ಮತ ಹಾಕಿ. ಅದರ ಬದಲು ಬೇರೆಯವರಿಗೆ ಮತ ಹಾಕಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಟಿ.ಬಿ ಜಯಚಂದ್ರ ಅವರು ಎರಡೂವರೆ ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಆದರೆ ಕಳೆದ ಎರಡೂವರೆ ವರ್ಷದಲ್ಲಿ ಬಿಡಿಗಾಸು ಕ್ಷೇತ್ರಕ್ಕೆ ಬಂದಿಲ್ಲ. ಸತ್ಯನಾರಾಯಣ ಶಾಸಕರಾಗಿದ್ದಗಲೂ ಸಹ ಏನು ಮಾಡಲಿಲ್ಲ ಎಂದರು. ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.