ತುಮಕೂರು : ಸರಸ್ವತಿಯನ್ನು ಹರಿದು ಹಾಕುವ ಸಂಸ್ಕೃತಿ ನಮ್ಮ ದೇಶದಲ್ಲಿ ಇರಲಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ನಗರದಲ್ಲಿಂದು ಡಿಕೆಶಿ ಪಠ್ಯಪುಸ್ತಕ ಹರಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರಸ್ವತಿ ಅಕಸ್ಮಾತ್ ಕಾಲಿಗೆ ತಾಗಿದ್ರೆ ನಾವು ಕಣ್ಣಿಗೆ ಒತ್ಕೊಂಡು ನಮಸ್ಕಾರ ಮಾಡ್ತೀವಿ. ಆದರೆ ಡಿಕೆಶಿ ಅವರ ವರ್ತನೆಗೆ ನಾವೇನು ಮಾಡೋಕ್ಕಾಗಲ್ಲ ಎಂದು ಹೇಳಿದರು.
ಪಠ್ಯಪುಸ್ತಕದ ಬಗ್ಗೆ ಮಾತನಾಡಿದ ಅವರು, ಬರಗೂರು ರಾಮಚಂದ್ರಪ್ಪನವರ ಕಾಲದಲ್ಲಿ 120 ತಪ್ಪುಗಳನ್ನು 169 ಪುಟಗಳಲ್ಲಿ ಮಾಡಿದ್ದರು. ನಮ್ಮ ಕಾಲದಲ್ಲಿ ಕೇವಲ 17 ತಪ್ಪುಗಳಾಗಿದ್ದು, ಅದನ್ನು ನಾವು ಸರಿಪಡಿಸಿದ್ದೇವೆ. ಎನ್.ಇ.ಪಿ ಪ್ರಕಾರ ಶಿಕ್ಷಣ ಇಲಾಖೆಯ ಹೆಸರನ್ನು ಬದಲಾಯಿಸಲಾಗಿದ್ದು, ಆಡಳಿತಾತ್ಮಕ ಬದಲಾವಣೆ ಬಗ್ಗೆ ಮುಂದೆ ಚರ್ಚಿಸುತ್ತೇವೆ. ಈಗಾಗಲೇ ಶೆ. 75 ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತಲುಪಿದೆ ಎಂದು ಸಚಿವರು ಮಾಹಿತಿ ನೀಡಿದರು.