ತುಮಕೂರು:ನನ್ನ ಬದುಕಿನ ಎಲ್ಲಾ ಸಂದರ್ಭದಲ್ಲಿಯೂ ನಾನು ನಂಬಿಕೊಂಡು ಬಂದಿರುವ ಕಾಡುಸಿದ್ದೇಶ್ವರ ಅಜ್ಜನನ್ನು ಭೇಟಿ ಮಾಡಿದ್ದೇನೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜನ ಆಶೀರ್ವಾದ ಪಡೆದ ಡಿಕೆಶಿ - ನೊಣವಿನಕೆರೆ ಕಾಡು ಸಿದ್ದೇಶ್ವರ ಮಠ
ತುಮಕೂರು ಜಿಲ್ಲೆ ನೊಣವಿನಕರೆಯ ಶ್ರೀ ಕಾಡು ಸಿದ್ದೇಶ್ವರ ಮಠಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.
![ಕಾಡು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜನ ಆಶೀರ್ವಾದ ಪಡೆದ ಡಿಕೆಶಿ](https://etvbharatimages.akamaized.net/etvbharat/prod-images/768-512-4884630-thumbnail-3x2-brm.jpg)
ತುಮಕೂರು ಜಿಲ್ಲೆ ನೊಣವಿನಕರೆಯ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಷ್ಟದ ಸಂದರ್ಭದಲ್ಲಿ ದೇವರು ನನ್ನ ಕೈ ಹಿಡಿದಿದ್ದಾರೆ. ನಾನು ಇಟ್ಟಿರುವ ನಂಬಿಕೆ ಭಕ್ತನಿಗೂ ಭಗವಂತನಿಗೆ ಬಿಟ್ಟ ವಿಚಾರ ಎಂದರು.
ನಾನು ಕುಟುಂಬ ಸಮೇತ ಬಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಿನ್ನೆ ನೇರವಾಗಿ ಇಲ್ಲಿಗೆ ಬರಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಇಂದು ಕಾಡುಸಿದ್ದೇಶ್ವರನ ಭೇಟಿ ಮಾಡುವ ಭಾಗ್ಯ ಸಿಕ್ಕಿದೆ. ನನಗೆ ಧೈರ್ಯ ಇದೆ, ನಂಬಿಕೆ ಇದೆ ನ್ಯಾಯಬದ್ದವಾಗಿ ಇದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಬಹಳಷ್ಟು ಮಂದಿ ಮಠಗಳಲ್ಲಿ ನನಗೋಸ್ಕರ ಪೂಜೆ ಮಾಡ್ತಿದ್ದಾರೆ, ಇಲ್ಲಿಂದ ನೇರವಾಗಿ ನನಗೋಸ್ಕರ ರಸ್ತೆಗಳಿದು ಪ್ರತಿಭಟನೆ ಮಾಡಿದ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆಯಲು ಶಿರಾಗೆ ಹೋಗ್ತಿರೋದಾಗಿ ಅವರು ತಿಳಿಸಿದ್ರು.