ತುಮಕೂರು: ಇತ್ತೀಚೆಗೆ ಬೆಂಗಳೂರಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಸ್ವಾಮೀಜಿಗಳು ಇದ್ದರು. ಅದಕ್ಕೆ ಪಠ್ಯ ಪುಸ್ತಕವನ್ನು ಹರಿದು ಹಾಕಿದೆ. ಇಲ್ಲದಿದ್ದರೆ ಸುಟ್ಟು ಹಾಕುತ್ತಿದ್ದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಹರಿದು ಹಾಕಿರುವುದು ಹೊಸ ಸಂಸ್ಕೃತಿಯಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್, ಬಸವಣ್ಣನವರಿಗೆ ಮಾಡಿದ ಅಪಮಾನವನ್ನು ಸಹಿಸಿಕೊಂಡು ಇರೋದಿಕ್ಕೆ ಆಗಲ್ಲ ಎಂದರು.
ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಮಾಡಲಾಗುತ್ತಿದೆ. ಸಭೆಯಲ್ಲಿ ಜಿಲ್ಲೆಯ ಸಾಮಾಜಿಕ, ರಾಜಕೀಯ, ರೈತ, ನಿರುದ್ಯೋಗ, ಶೋಷಣೆ ಬಗ್ಗೆ ಚರ್ಚೆ ನಡೆಯುತ್ತದೆ ಎಂದರು. ನಾಯಕರಷ್ಟೇ ಅಲ್ಲ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಉದಯ್ ಪುರದ ಮಾದರಿಯಲ್ಲಿ ಸಭೆ ನಡೆಯುತ್ತಿದೆ ಎಂದರು.