ಕರ್ನಾಟಕ

karnataka

ETV Bharat / state

ಡ್ಯಾಂ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಹೇಳ್ಬೇಕು, ಇದ್ರಲ್ಲಿ ರಾಜಕಾರಣಿಗಳಿಗೆ ಕೆಲಸ ಏನಿದೆ?: ಡಿಕೆಶಿ - ಮಂಡ್ಯ

ಕೆಆರ್​​ಎಸ್​ ಡ್ಯಾಂ ಕುರಿತಂತೆ ಹೆಚ್​​​ಡಿಕೆ-ಸುಮಲತಾ ನಡುವೆ ಜಟಾಪಟಿ ನಡೆಯುತ್ತಿದೆ. ಇದೀಗ ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಕ್ರಿಯಿಸಿದರು.

dk-shivakumar
ಡಿಕೆ ಶಿವಕುಮಾರ್

By

Published : Jul 8, 2021, 7:53 PM IST

ತುಮಕೂರು:ಕೆಆರ್​ಎಸ್ ಡ್ಯಾಂ ಬಿರುಕು ವಿಚಾರವಾಗಿ ಕುಣಿಗಲ್​​​ನಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ದೊಡ್ಡ ದೊಡ್ಡವರ ಸುದ್ದಿ ನಮಗೆ ಬೇಡ. ಕೆಆರ್​ಎಸ್​ ವಿವಾದದಲ್ಲಿ ಅವರವರ ವಾದವನ್ನು ಅವರವರು ಮಾಡುತ್ತಿದ್ದಾರೆ ಎಂದರು.

ಡ್ಯಾಂ ಪರಿಸ್ಥಿತಿ ನಮಗೇನು ಗೊತ್ತು. ಡ್ಯಾಂ ನಿರ್ವಹಣೆಗಾಗಿ ಸರ್ಕಾರವೇ ಅಧಿಕಾರಿಗಳನ್ನು ನೇಮಿಸಿರುತ್ತದೆ. ಅದಕ್ಕಾಗಿ ಅವರಿಗೆ ವೇತನ ನೀಡಲಾಗುತ್ತದೆ. ಅವರೇ ಹೇಳಬೇಕು. ಇದ್ರಲ್ಲಿ ರಾಜಕಾರಣಿಗಳ ಕೆಲಸ ಏನಿದೆ?. ಡ್ಯಾಂ ಪರಿಸ್ಥಿತಿ ಅರಿಯಲು ಸಮಿತಿಯಿದೆ. ಪ್ರತಿ ವರ್ಷವೂ ಡ್ಯಾಂ ಸ್ಥಿತಿಗತಿ ಬಗ್ಗೆ ಅವರು ಮಾಹಿತಿ ನೀಡುತ್ತಾರೆ. ಡ್ಯಾಂಗೆ ಏನಾಗಿದೆ ಎಂಬುದನ್ನು ಅವರೇ ಹೇಳಬೇಕು ಎಂದರು.

ಹೆಚ್​​​ಡಿಕೆ-ಸುಮಲತಾ ನಡುವಿನ ವಾಕ್ಸಮರ ಕುರಿತು ಡಿಕೆಶಿ ಪ್ರತಿಕ್ರಿಯೆ

ರಾಜಕೀಯ ವ್ಯಕ್ತಿಗಳಿಗೆ ಇದ್ರಲ್ಲಿ ಏನು ಸಂಬಂಧ?, ನಾವು ಮಾತಾಡೋ ಹಾಗಿಲ್ಲ. ಕೆಆರ್​​​​ಎಸ್ ವಿಚಾರ ಎತ್ತಿದವರೆಲ್ಲಾ ದೊಡ್ಡವರು ಅವರ ಬಗ್ಗೆ ಮಾತಾಡಲ್ಲ ಎಂದರು.

ಇದನ್ನೂ ಓದಿ: ಕುಮಾರಸ್ವಾಮಿ, ಸುಮಲತಾ ನಡುವಿನ ವಾಗ್ಯುದ್ಧ ಇಂದು ನಿನ್ನೆಯದಲ್ಲ, ಆ ಸೋಲಿನಿಂದಲೇ ಶುರು!

ABOUT THE AUTHOR

...view details