ತುಮಕೂರು:ಗುಬ್ಬಿ ತಾಲೂಕಿನ ಕಡಬ ಗ್ರಾಮದ ಪೇಟೆ ಬೀದಿಯಲ್ಲಿ ರಸ್ತೆ ಮಧ್ಯೆ ದಿಢೀರ್ ಕುಸಿತ ಉಂಟಾಗಿ ದೊಡ್ಡ ಕಂದಕ ಸೃಷ್ಟಿಯಾಗಿದೆ. ಜೊತೆಯಲ್ಲಿ ನೀರು ಸಹ ಉಕ್ಕಿ ಬರುತ್ತಿದೆ.
ಬಹಳ ವರ್ಷದ ನಂತರದಲ್ಲಿ ತುಂಬಿ ಹರಿದ ಕಡಬ ಕೆರೆ ತುಂಬಿದೆ. ಕಂದಕ ಕಂಡ ಸ್ಥಳದಲ್ಲಿ ಈ ಹಿಂದೆ ದೊಡ್ಡ ಬಾವಿ ಇತ್ತು. ಕಡಬ ಗ್ರಾಮಕ್ಕೆ ಕುಡಿಯುವ ನೀರು ಕೊಡುವ ಬಾವಿ ಬತ್ತಿದ ಮೇಲೆ ಮುಚ್ಚಲಾಗಿತ್ತು. ಈಗ ಬಾವಿಯಲ್ಲಿ ಉಕ್ಕಿರುವ ನೀರು ಕಂದಕ ಸೃಷ್ಟಿಸಿದೆ.
ತುಮಕೂರಿನಲ್ಲಿ ದಿಢೀರ್ ಕುಸಿದ ರಸ್ತೆಯಲ್ಲಿ ಬೃಹತ್ ಕಂದಕ ಸೃಷ್ಠಿ ಬಾವಿ ಜಾಗ ಸಂಪೂರ್ಣ ಕುಸಿಯುತ್ತಿದೆ. ಈ ಬಾರಿ ಸುರಿದ ಮಳೆಯಿಂದ ಕುಸಿದ ಈ ಸ್ಥಳ ಕೆರೆಗೆ ಹತ್ತಿರವಾಗಿದೆ. ನೂರು ವರ್ಷದ ಹಳೆಯ ಬಾವಿ ಮುಚ್ಚಿ ಹಲವು ವರ್ಷಗಳೇ ಕಳೆದಿದ್ದರೂ ಅಂತರ್ಜಲ ಉಕ್ಕಿ ಬಾವಿ ಇರುವಿಕೆ ತೋರುತ್ತಿದೆ. ಕೋಟೆ ನಡುವೆ ಇದ್ದ ಕಡಬ ಗ್ರಾಮ ಸಮೃದ್ಧವಾಗಿದ್ದ ಕಾಲದಲ್ಲಿ ಈ ಬಾವಿ ಜನರ ಜೀವ ಜಲ ನೀಡಿತ್ತು. ಈಗ ಕಡಬ ಪೇಟೆ ಬೀದಿ ಜನನಿಬಿಡ ಪ್ರದೇಶವಾಗಿದೆ. ದಿಢೀರ್ ಕುಸಿದ ರಸ್ತೆಯಲ್ಲಿ ಯಾರೂ ಓಡಾಡಿರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಕಂದಕ ನಿಧಾನವಾಗಿ ದೊಡ್ಡದಾಗಿ ನಿರ್ಮಾಣವಾಗುತ್ತಿದೆ.
ಓದಿ:ಜಾನುವಾರು ಚರ್ಮಗಂಟು ರೋಗ: ಪರಿಹಾರ ಧನಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ