ತುಮಕೂರು:ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂಬ ಉದ್ದೇಶದಿಂದ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ವಿವಿಧ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಹೆಲ್ಮೆಟ್ ಧರಿಸಿ ಬುಲೆಟ್ ಏರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲನೆ ಮಾಡಬೇಕು ಎಂಬ ಉದ್ದೇಶದಿಂದ ತುಮಕೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಅವರು ಹೆಲ್ಮೆಟ್ ಹಾಕಿಕೊಂಡು ಬುಲೆಟ್ ಏರಿ ಬೈಕ್ ಜಾಥಾ ನಡೆಸಿದರು.
ಜಾಗೃತಿ ಮೂಡಿಸುವ ಸಲುವಾಗಿ ತುಮಕೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಅವರು ಹೆಲ್ಮೆಟ್ ಹಾಕಿಕೊಂಡು ಬುಲೆಟ್ ಏರಿ ಬೈಕ್ ಜಾಥಾ ನಡೆಸಿದರು. ಪೊಲೀಸ್ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಯೊಂದಿಗೆ ತುಮಕೂರು ನಗರದಾದ್ಯಂತ ಬೈಕ್ ಜಾಥಾ ನಡೆಸಿ, ಹೆಲ್ಮೆಟ್ ಎಷ್ಟರಮಟ್ಟಿಗೆ ವಾಹನ ಸವಾರರಿಗೆ ಸುರಕ್ಷಿತ ವಾದದ್ದು ಎಂಬುದನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ಜಾಗೃತಿ ಮೂಡಿಸಿದರು.
ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಬುಲೆಟ್ನಲ್ಲಿ ಹಿಂದೆ ಕುಳಿತು ಹೆಲ್ಮೆಟ್ ಧರಿಸಿದ್ದು ಗಮನಾರ್ಹವಾಗಿತ್ತು. ಅಲ್ಲದೆ, ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸಬೇಕು ಎಂಬ ಸಂದೇಶವನ್ನು ಸಾರಿದರು.