ಕರ್ನಾಟಕ

karnataka

ETV Bharat / state

ರೆಡ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ - ರೆಡ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ತಾಲೂಕು ಆಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಪ್ರಸ್ತುತ 8 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ. ಜಟ್ಟಿ ಅಗ್ರಹಾರ ಸೇರಿದಂತೆ ಉಳಿದ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ರೆಡ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
ರೆಡ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

By

Published : May 22, 2021, 7:37 AM IST

ತುಮಕೂರು:ಕೊರಟಗೆರೆ ತಾಲೂಕಿನ ರೆಡ್ ಝೋನ್ ಗ್ರಾಮ ತೀತಾ, ಹಾಟ್ ಸ್ಪಾಟ್ ಗ್ರಾಮಗಳಾದ ಜಟ್ಟಿ ಅಗ್ರಹಾರ ಮತ್ತು ಎಲೆರಾಂಪುರ ಗ್ರಾಮಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.

ಜಿಲ್ಲಾಧಿಕಾರಿಗಳು ಸೋಂಕಿತರ ಮನೆ-ಮನೆಗೆ ಭೇಟಿ ನೀಡಿ ಕೋವಿಡ್ ಕಿಟ್ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಗ್ಯ ವಿಚಾರಿಸಿ, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಧೈರ್ಯ ತುಂಬಿದರು.

ತೀತಾ ಗ್ರಾಮದಲ್ಲಿ 44 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ರೆಡ್ ಝೋನ್ ಎಂದು ಘೋಷಿಸಲಾಗಿದೆ. ಅದೇ ರೀತಿ 22 ಪ್ರಕರಣಗಳಿದ್ದ ಜಟ್ಟಿ ಅಗ್ರಹಾರ ಗ್ರಾಮವನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.

For All Latest Updates

TAGGED:

tumakuru

ABOUT THE AUTHOR

...view details