ಕರ್ನಾಟಕ

karnataka

ETV Bharat / state

ಕೊರೊನಾ ಮೂರನೇ ಅಲೆ ತಡೆಗೆ ತುಮಕೂರು ಜಿಲ್ಲಾಡಳಿತ ಸಿದ್ಧತೆ - covid 3rd wave control in tumkur

ಕೋವಿಡ್​ ಮೂರನೇ ಅಲೆ ನಿಯಂತ್ರಣಕ್ಕೆ ತುಮಕೂರು ಜಿಲ್ಲಾಡಳಿತ ಸಜ್ಜಾಗಿದೆ. ರೈಲು, ಬಸ್ ನಿಲ್ದಾಣಗಳಲ್ಲಿ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಲಕ್ಷಣ ಇದ್ದವರನ್ನು ಸ್ಥಳದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ 70 ರಿಂದ 80 ಕೇಸ್​ಗಳು ಬರುತ್ತಿವೆ. ಹೀಗಾಗಿ, ಹೋಂ ಐಸೋಲೇಷನ್ ಅನುಮತಿ ರದ್ದು ಮಾಡಲಾಗಿದೆ.

district-administration-prepares-for-control-the-3rd-wave-of-corana-in-tumkur
ಕೊರೊನಾ ಮೂರನೇ ಅಲೆ ತಡೆಗೆ ತುಮಕೂರು ಜಿಲ್ಲಾಡಳಿತ ಸಿದ್ಧತೆ

By

Published : Aug 9, 2021, 6:08 PM IST

Updated : Aug 10, 2021, 10:13 AM IST

ತುಮಕೂರು: ಕೋವಿಡ್ 2ನೇ ಅಲೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದರು. ಸಾವಿನ ಪ್ರಮಾಣ ಕೂಡ ಹೆಚ್ಚಾಗಿತ್ತು. ಇದರಿಂದಾಗಿ 2ನೇ ಅಲೆಯಲ್ಲಿ ಆದ ಎಡವಟ್ಟು 3ನೇ ಅಲೆಯಲ್ಲಿ ಆಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಹೊರ ರಾಜ್ಯಗಳಿಂದ ಬರುವವರ ಮೇಲೆ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಂದ ಬರುವವರ ಮೇಲೆಯೂ ತೀವ್ರ ನಿಗಾ ಇರಿಸಿದೆ. ಕೋವಿಡ್​ ಸಂಭಾವ್ಯ 3ನೇ ಅಲೆ ತಡೆಗೆ ತುಮಕೂರು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಕೊರೊನಾ ಮೂರನೇ ಅಲೆ ತಡೆಗೆ ತುಮಕೂರು ಜಿಲ್ಲಾಡಳಿತ ಸಿದ್ಧತೆ

ರೈಲು, ಬಸ್ ನಿಲ್ದಾಣಗಳಲ್ಲಿ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಲಕ್ಷಣ ಇದ್ದವರನ್ನು ಸ್ಥಳದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನ 70 ರಿಂದ 80 ಕೇಸ್ ಗಳು ಬರುತ್ತಿವೆ. ಹೀಗಾಗಿ ಹೋಂ ಐಸೋಲೇಷನ್ ಅನುಮತಿ ರದ್ದುಮಾಡಲಾಗಿದೆ.

ಪ್ರತಿಯೊಬ್ಬ ಸೋಂಕಿತನು ಕೋವಿಡ್ ಕೇರ್ ಸೆಂಟರ್​ನಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ. ಈ ಮೂಲಕ ಸೋಂಕಿತನಿಂದ ಮನೆ ಸದಸ್ಯರಿಗೆಲ್ಲಾ ಸೋಂಕು ಹರಡುವ ಸಾಧ್ಯತೆಗೆ ಕಡಿವಾಣ ಹಾಕಲಾಗಿದೆ.

ಪಾಸಿಟಿವ್ ಕೇಸ್ ಹೆಚ್ಚಿಗೆ ಕಂಡು ಬಂದಿದ್ದ ಶಿರಾ ತಾಲೂಕು ಸೇರಿದಂತೆ ಉಳಿದ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಪರೀಕ್ಷೆಯನ್ನೇ ಮಾಡದ ಪ್ರದೇಶಗಳಲ್ಲಿ ಹಾಗೂ ಮಾರುಕಟ್ಟೆ, ಮಂಡಿ, ಸಂತೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ವರದಿ ಕಡ್ಡಾಯ: ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಬಂದವರಿಗೆ ಮಾತ್ರ ಮಂಡಿಗಳಿಗೆ ಬರಲು ಅವಕಾಶ ಕೊಡಲು ನಿರ್ದೆಶನ ನೀಡಲಾಗಿದೆ. ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಮಾಡಲಾಗಿದೆ. ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದಿಂದ ಬರುವವರೂ ಕೋವಿಡ್ ವರದಿ ಹೊಂದಿರುವುದನ್ನು ಕಡ್ಡಾಯ ಮಾಡಲು ಜಿಲ್ಲಾ ಆಡಳಿತ ಮುಂದಾಗಿದೆ. ಇನ್ನೊಂದು ಸುತ್ತಿನ ಸಭೆ ಬಳಿಕ ಇದು ಅಧಿಕೃತವಾಗುವ ಸಾಧ್ಯತೆ ಇದೆ.

ಕಳೆದ ಒಂದು ವಾರದ ಅಂಕಿ-ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಕೋವಿಡ್ ದೃಢಪಡುವ ಪ್ರಮಾಣ ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಈ ವಾರದಲ್ಲಿ ಯಾವ ದಿನವೂ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿಯನ್ನು ದಾಟಿಲ್ಲ.

ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ: ಒಟ್ಟಾರೆ 2ನೇ ಅಲೆ ಸಮಯದಲ್ಲಿ ಪ್ರಮುಖವಾಗಿ ಕಾಡಿದ್ದ ಆಮ್ಲಜನಕ ಕೊರತೆ ನೀಗಿಸುವ ಕೆಲಸಗಳು ನಡೆದಿವೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿವೆ.

ಆದರೆ, ಜಿಲ್ಲಾ ಕೇಂದ್ರದಲ್ಲೇ ಈ ಕೆಲಸ ಅಷ್ಟೊಂದು ಚುರುಕಾಗಿಲ್ಲ. ಜಿಲ್ಲಾಸ್ಪತ್ರೆ ಆವರಣದ ಬಳಿ ಒಂದು ಸಾವಿರ ಎಲ್‌ಪಿಎಂ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದು ಕೆಲ ದಿನದಲ್ಲೇ ಪೂರ್ಣಗೊಳ್ಳಲಿದೆ. ಈ ಮೂಲಕ ಜಿಲ್ಲಾಡಳಿತ 3ನೇ ಅಲೆ ನಿಯಂತ್ರಿಸಲು ಸಜ್ಜುಗೊಂಡಿದೆ.

ಓದಿ:ಅಪಾರ್ಟ್​ಮೆಂಟ್​ಗಳ ಸ್ವಿಮ್ಮಿಂಗ್ ಪೂಲ್, ಜಿಮ್ ಕ್ಲೋಸ್: ಹಬ್ಬಹರಿದಿನಗಳಲ್ಲಿ ದೇವಸ್ಥಾನಗಳಿಗೂ ನಿರ್ಬಂಧ

Last Updated : Aug 10, 2021, 10:13 AM IST

ABOUT THE AUTHOR

...view details