ತುಮಕೂರು:ಶಾಸಕ ಜ್ಯೋತಿ ಗಣೇಶ್ ಅವರ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಂದಂತಹ ಚೆಕ್ಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ, ಮಾತನಾಡಿದ ಶಾಸಕ ಜ್ಯೋತಿಗಣೇಶ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಿಹಾರ ನಿಧಿಯಿಂದ ಹತ್ತು ಕುಟುಂಬದವರಿಗೆ 8,50,000 ರೂ.ನಷ್ಟು ಹಣವನ್ನು ನೀಡಲಾಗಿದೆ. ಕಷ್ಟದಲ್ಲಿ ಜೀವನ ಸಾಗಿಸುತ್ತಿರುವವರಿಗೆ, ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಂತವರಿಗೆ ಇಂದು ಪರಿಹಾರದ ಚೆಕ್ನನ್ನು ವಿತರಣೆ ಮಾಡಲಾಗಿದೆ.