ಕರ್ನಾಟಕ

karnataka

ETV Bharat / state

ಪಡಿತರ ವಿತರಣೆಯಲ್ಲಿ ತಾರತಮ್ಯ ಆರೋಪ: ತಹಶೀಲ್ದಾರ್​ ದಾಳಿ, ಪರಿಶೀಲನೆ

ಪಡಿತರ ವಿತರಣೆಯಲ್ಲಿ ತಾರತಮ್ಯ ಹಾಗೂ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್​ ಮೋಹನ್​ ಕುಮಾರ್​ ವಿತರಣೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

Discrimination in ration distribution
ಪಡಿತರ ವಿತರಣೆಯಲ್ಲಿ ತಾರತಮ್ಯ

By

Published : Apr 9, 2020, 6:59 PM IST

ತುಮಕೂರು: ಪಡಿತರ ವಿತರಣೆಯಲ್ಲಿ ಗ್ರಾಹಕರಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಅಂಗಡಿಯಲ್ಲಿದ್ದ ಪಡಿತರವನ್ನು ತಹಶೀಲ್ದಾರ್ ವಶಕ್ಕೆ ಪಡೆದು ಬೇರೆಯವರಿಗೆ ವಿತರಿಸುವ ಜವಾಬ್ದಾರಿಯನ್ನು ನೀಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಪಡಿತರ ವಿತರಣೆಯಲ್ಲಿ ತಾರತಮ್ಯ

ನಗರದ ಚಿಕ್ಕಪೇಟೆಯಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ಸೈಯದ್ ಖಾಲಿದ್ ಅಹ್ಮದ್ ಎಂಬ ವ್ಯಕ್ತಿ ಪಡಿತರ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ಈ ದೂರಿಗೆ ಸ್ಪಂದಿಸಿದ ತಹಶೀಲ್ದಾರ್ ಮೋಹನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು. ಆಗ ಸ್ಥಳದಲ್ಲಿದ್ದ ಫಲಾನುಭವಿಗಳು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅದಕ್ಕಾಗಿ ಏಪ್ರಿಲ್ 7 ರಿಂದ ಪಡಿತರ ಕೊಟ್ಟಿಲ್ಲ ಎಂದು ಆರೋಪಿಸಿದರು.

ನ್ಯಾಯ ಬೆಲೆ ಅಂಗಡಿಯಲ್ಲಿದ್ದ ಕಂಪ್ಯೂಟರ್, ಸ್ಕೇಲ್​ಗಳ ಸಮೇತ ಹೊರ ಹೋಗುವಂತೆ ಸೈಯದ್ ಖಾಲಿದ್​ ಅವರಿಗೆ ತಹಶೀಲ್ದಾರ್ ಸೂಚಿಸಿದ್ದು, ಬೇರೊಬ್ಬರಿಗೆ ಪರವಾನಗಿ ನೀಡಿ, ಸಂಜೆಯಿಂದಲೇ ಗ್ರಾಹಕರಿಗೆ ಪಡಿತರ ವಿತರಣೆ ಮಾಡುವಂತೆ ತಿಳಿಸಿದರು.

ಸಂಜೆ 5 ಗಂಟೆಗೆ ಪಡಿತರ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ABOUT THE AUTHOR

...view details