ತುಮಕೂರು: ಹಳೇ ದ್ವೇಷದ ಹಿನ್ನೆಲೆ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯನ್ನು ನಾಲ್ವರು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ತುಮಕೂರು: ಹಳೇ ದ್ವೇಷ ಹಿನ್ನೆಲೆ ಚೂರಿಯಿಂದ ಇರಿದು ಡಿಪ್ಲೋಮಾ ವಿದ್ಯಾರ್ಥಿಯ ಹತ್ಯೆ - Diploma student assassination
ಡಿಪ್ಲೋಮಾ ವಿದ್ಯಾರ್ಥಿಯನ್ನು ಹಳೇ ದ್ವೇಷದ ಹಿನ್ನೆಲೆ ನಾಲ್ವರು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಡಿಪ್ಲೋಮಾ ವಿದ್ಯಾರ್ಥಿ ಹತ್ಯೆ
ಲಿಖಿತ್ ಗೌಡ(17) ಮೃತ ವಿದ್ಯಾರ್ಥಿ. ಆದರ್ಶ ನಗರದಲ್ಲಿರುವ ಸೇಂಟ್ ಮೋಸಸ್ ಸ್ಕೂಲ್ ಹಿಂಭಾಗದಲ್ಲಿ ಘಟನೆ ನಡೆದಿದೆ. ನಾಲ್ವರು ಚಾಕುವಿನಿಂದ ಲಿಖಿತ್ನ ಬಲಗೈ ತೋಳಿಗೆ ಇರಿದು ಪರಾರಿಯಾಗಿದ್ದರು. ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದರೂ ಸಹ ತೀವ್ರ ರಕ್ತಸ್ರಾವವಾಗಿ ಲಿಖಿತ್ ಮೃತಪಟ್ಟಿದ್ದಾನೆ.
ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಪೋಲಿಸರು ಬಲೆ ಬೀಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.