ಕರ್ನಾಟಕ

karnataka

ETV Bharat / state

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ - ತುಮಕೂರು ದೇವರಾಯದುರ್ಗಾದ ಯೋಗನರಸಿಂಹ ದೇವಾಯಲ

ಜಿಲ್ಲೆಯ ದೇವರಾಯನ ದುರ್ಗದ ಯೋಗನರಸಿಂಹ ದೇವಾಲಯಕ್ಕೆ ಬರುವ ಭಕ್ತರು ತಮ್ಮ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ
vehicles parking problem in Devarayanadurga Temple

By

Published : Jan 9, 2020, 5:36 PM IST

ತುಮಕೂರು :ಜಿಲ್ಲೆಯ ದೇವರಾಯನ ದುರ್ಗದ ಯೋಗನರಸಿಂಹ ದೇವಾಲಯಕ್ಕೆ ಬರುವ ಭಕ್ತರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ದೇವರಾಯನ ದುರ್ಗದ ದೇಗುಲದ ಬಳಿ ಪಾರ್ಕಿಂಗ್ ಅವ್ಯವಸ್ಥೆ

ಮುಜರಾಯಿ ಇಲಾಖೆಗೆ ಸೇರಿರುವ ಈ ದೇಗುಲದ ಸುತ್ತಮುತ್ತ ವಾಹನ ನಿಲುಗಡೆಗೆ ಸೂಕ್ತ ರೀತಿಯ ವ್ಯವಸ್ಥೆ ಇಲ್ಲ. ಅಲ್ಲದೇ ರಸ್ತೆ ಪಕ್ಕದ ವ್ಯಾಪಾರಿಗಳು ಎಲ್ಲೆಂದರಲ್ಲಿ ಗೂಡಂಗಡಿಗಳನ್ನು ಹಾಕಿಕೊಂಡಿದ್ದು, ವಾಹನ ನಿಲುಗಡೆಗೆ ತೀವ್ರ ತೊಂದರೆಯಾಗುತ್ತದೆ. ಕಿರಿದಾದ ರಸ್ತೆಗಳಲ್ಲಿ ದೇಗುಲಕ್ಕೆ ಬರುವ ಪ್ರವಾಸಿಗರು ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಷ್ಟೇ ಅಲ್ಲದೇ ವಾಹನ ನಿಲುಗಡೆ ಮಾಡಿ ದೇವರ ದರ್ಶನ ಪಡೆದು ವಾಪಸ್ ಬರುವ ವೇಳೆಗೆ ವಾಹನದಲ್ಲಿ ಇದ್ದಂತಹ ಸಾಮಾಗ್ರಿಗಳು ಕೂಡ ಕಳ್ಳರ ಪಾಲಾಗುತ್ತಿದೆ ಎಂದು ಭಕ್ತರು ದೂರಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಅನ್ನೋದು ಸ್ಥಳೀಯರ ಆಗ್ರಹ.

ABOUT THE AUTHOR

...view details