ತುಮಕೂರು: ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಬಂದ ಭಕ್ತರೊಬ್ಬರು ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನಾವಳ್ಳಿ ಗ್ರಾಮದ ರೇವಣ್ಣ ಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ. ಇಲ್ಲಿನ ರೇವಣ್ಣ ಸಿದ್ದೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದ ಬೆಂಗಳೂರಿನ ನಿವಾಸಿ ಅನಂತಕುಮಾರ್ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ರೇವಣ್ಣ ಸಿದ್ದೇಶ್ವರ ಬೆಟ್ಟಕ್ಕೆ ಬೆಂಕಿ: ಕಾಲ್ನನಡಿಗೆಯಲ್ಲಿ ಆಗಮಿಸಿದ್ದ ಓರ್ವ ಭಕ್ತ ಸಾವು, 6 ಮಂದಿಗೆ ಗಾಯ - ಹೊನ್ನಾವಳ್ಳಿ ಪೊಲೀಸ್ ಠಾಣೆ
ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತ - ಬೆಂಕಿ ತಗುಲಿ ಸಾವು - ರೇವಣ್ಣ ಸಿದ್ದೇಶ್ವರ ಬೆಟ್ಟದಲ್ಲಿ ಘಟನೆ
ಕಾಲ್ನನಡಿಗೆಯಲ್ಲಿ ಸಿದ್ದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವ್ಯಕ್ತಿ ಬೆಂಕಿ ತಗುಲಿ ಸಾವು
ಕಿಡಿಗೇಡಿಗಳು ಬೆಟ್ಟದ ತಪ್ಪಲಿನ ಹುಲ್ಲಿಗೆ ಬೆಂಕಿ ಇಟ್ಟಿದ್ದರಿಂದ ಬೆಂಕಿಯ ಕೆನ್ನಾಲಿಗೆ ಬೆಟ್ಟಕ್ಕೂ ಆವರಿಸಿದೆ. ಇನ್ನು ಹೆಚ್ಚು ಗಾಳಿ ಬೀಸಿರುವುದರಿಂದ ಬೆಂಕಿ ಬೆಟ್ಟಕ್ಕೆ ಹಬ್ಬಿದೆ. ಈ ವೇಳೆ ಬೆಂಕಿ ತಗುಲಿ ಒಬ್ಬರು ಸಾವನ್ನಪ್ಪಿದ್ದು, 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹೊನ್ನಾವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಜನ್ಮದಿನ ಆಚರಿಸಿ ಬರುವಾಗ ಜವರಾಯನ ಅಟ್ಟಹಾಸ: ಹೊತ್ತಿ ಉರಿದ ಬಸ್,7 ಜನ ಸಜೀವ ದಹನ; ಮೋದಿ ಸಂತಾಪ