ತುಮಕೂರು:ದೇವೇಗೌಡರು ಎಂದು ಕೂಡ ಜಾತಿ ರಾಜಕಾರಣ ಮಾಡಿದವರಲ್ಲ. ಎಲ್ಲಾ ಹಿಂದುಳಿದ ವರ್ಗದವರ ಅಭಿವೃದ್ಧಿಯತ್ತ ಸಣ್ಣ ಶಕ್ತಿಯನ್ನು ಧಾರೆಯೆರೆದವರು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದ ಜೆಡಿಎಸ್ ಪಕ್ಷದ ಪ್ರಚಾರ ಸಭೆಯಲ್ಲಿ ಹೇಳಿದ್ರು.
ಹೀಗಾಗಿ ದೇವೇಗೌಡರನ್ನು ಸಣ್ಣ ಸಮುದಾಯದ ಮತದಾರರು ಮರೆಯಬಾರದು ಎಂದರು. ಚಿತ್ರದುರ್ಗದಲ್ಲಿ ಯಾದವ ಸಮುದಾಯಕ್ಕೆ ಸೇರಿದ ನಿವೃತ್ತ ಅಧಿಕಾರಿ ಕೋದಂಡರಾಮಯ್ಯ, ಚಿಕ್ಕಬಳ್ಳಾಪುರದಲ್ಲಿ ಈಡೀಗ ಸಮಾಜಕ್ಕೆ ಸೇರಿದ ಆರ್.ಎಲ್ .ಜಾಲಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಸಂಸದರನ್ನಾಗಿ ಆಯ್ಕೆ ಮಾಡಿ, ಅಂದು ಲೋಕಸಭೆಗೆ ಹೆಚ್.ಡಿ.ದೇವೇಗೌಡರು ಕರೆದುಕೊಂಡು ಹೋದ್ರು. ದೇವೇಗೌಡರು ಕೇವಲ ಒಕ್ಕಲಿಗರ ಮತದಿಂದಲೇ ಗೆಲುವು ಸಾಧಿಸುತ್ತಾರೆ ಎಂಬುದು ದುರಹಂಕಾರದ ಮಾತು. ನಾಯಕ ಸಮುದಾಯದ ಮತಗಳು, ದಲಿತ ಬಂಧುಗಳ ಮತಗಳು, ಕುರುಬ ಮತ್ತು ಯಾದವ ಸಮುದಾಯದ ಮತಗಳು ಹಾಗೂ ಅವರೆಲ್ಲರ ಆಶೀರ್ವಾದ ಬೇಕಿದೆ ಎಂದರು.