ಕರ್ನಾಟಕ

karnataka

ETV Bharat / state

ಕಲ್ಪತರು ನಾಡಿನಲ್ಲಿದೆ ಹಸಿರ ಸಿರಿಯ ಸಸ್ಯಕಾಶಿ.. ದೇವರಾಯನದುರ್ಗ ಎಂಬ ಅರಣ್ಯ ರಾಶಿ - ಔಷಧೀಯ ಗುಣ

ಕೊರಟಗೆರೆ ತಾಲೂಕಿನಲ್ಲಿರೋ ಸಿದ್ದರಬೆಟ್ಟ ಕೂಡ ಅಪಾರ ಪ್ರಮಾಣದ ಔಷಧೀಯ ಸಸ್ಯಗಳ ಆಗರವಾಗಿದೆ. ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಈ ಬೆಟ್ಟವನ್ನು ಹತ್ತಿದರೆ ಎಲ್ಲೆಂದರಲ್ಲಿ ಆಯುರ್ವೇದಿಕ್ ಔಷಧೀಯ ಗುಣಗಳುಳ್ಳ ಮರಗಿಡಗಳು ಕಾಣಸಿಗುತ್ತವೆ. ಇಲ್ಲಿ 900 ಔಷಧೀಯ ಸಸ್ಯಗಳಿವೆ. ಸುಮಾರು 6,600 ಅಡಿ ಎತ್ತರದವರೆಗೂ ಚಾಚಿಕೊಂಡಿದೆ.

ದೇವರಾಯನದುರ್ಗ ಎಂಬ ಅರಣ್ಯ ರಾಶಿ
ದೇವರಾಯನದುರ್ಗ ಎಂಬ ಅರಣ್ಯ ರಾಶಿ

By

Published : Jun 5, 2021, 6:06 AM IST

ತುಮಕೂರು: ಜಿಲ್ಲೆಯ ಪರಿಸರವಾದಿಗಳಿಗೆ ಜೂನ್ 5ರ ಪರಿಸರ ದಿನಾಚರಣೆಯ ವೇಳೆ ತಟ್ಟನೆ ನೆನಪಿಗೆ ಬರೋದು ಜಿಲ್ಲೆಯಲ್ಲಿ ಹಸಿರ ಸಿರಿಯಿಂದ ಕಂಗೊಳಿಸೋ ದೇವರಾಯನದುರ್ಗ ಅರಣ್ಯ ಪ್ರದೇಶ. ಈ ಅರಣ್ಯ ಪ್ರದೇಶದಲ್ಲಿರೋ ಅಪಾರ ಸಸ್ಯಸಂಪತ್ತನ್ನು ನೋಡಿ ಹೆಮ್ಮೆ ಪಡುತ್ತಾರೆ. ತುಮಕೂರಿಗೆ ನಿರ್ಮಲ ಪರಿಸರವನ್ನು ಈ ಅರಣ್ಯ ಪ್ರದೇಶ ನಿರಂತರವಾಗಿ ಧಾರೆ ಎರೆಯುತ್ತಾ ಬಂದಿದೆ.

ದೇವರಾಯನದುರ್ಗ ವೈಶಿಷ್ಟ್ಯವೇ ಹಾಗೆ ಎತ್ತ ನೋಡಿದ್ರೂ ವೈವಿದ್ಯಮಯ ಸಸ್ಯ ರಾಶಿ, ಇದರ ಒಳಹೊಕ್ಕರೆ ಸಹ್ಯಾದ್ರಿ ಪರ್ವತ ಶ್ರೇಣಿಯೊಳಗೆ ಹೋದಂತಹ ಅನುಭವ, ಸ್ವಚ್ಚಂದವಾಗಿ ಓಡಾಡೋ ವ್ಯನಮೃಗಗಳು, ಪರಿಸರಪ್ರಿಯರ ಹಾಟ್ ಸ್ಪಾಟ್ ಆಗಿದೆ ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶ.

ಕಲ್ಪತರು ನಾಡಿನಲ್ಲಿದೆ ಹಸಿರ ಸಿರಿಯ ಸಸ್ಯಕಾಶಿ

10,278 ಎಕರೆ ಪ್ರದೇಶದಲ್ಲಿ ಸಸ್ಯ ಸಂಪತ್ತು ವಿಸ್ತರಿಸಿಕೊಂಡಿದೆ. ಶ್ರೀಗಂಧ, ನಂದಿ, ಹೊನ್ನೆ, ಬೀಟೆ ಸೇರಿದಂತೆ ಅನೇಕ ಜಾತಿಯ ಮರಗಳು ಬೆಳೆದು ನಿಂತಿರುವ ಅಗಾಧ ಹಸಿರ ಸಿರಿಯನ್ನು ಇಲ್ಲಿ ಕಾಣಬಹುದು. ಈ ಸಸ್ಯಸಂಕುಲದ ನಡುವೆ ವನ್ಯಮೃಗಗಳು ಸ್ವಚ್ಚಂಧವಾಗಿ ವಿಹರಿಸುತ್ತವೆ. ಚಿರತೆ, ಕರಡಿ, ಪುನುಗುಬೆಕ್ಕು, ಜಿಂಕೆ, ಮೊಲ ಮತ್ತಿತರ ಪ್ರಾಣಿಗಳ ಆವಾಸ ಸ್ಥಾನವಾಗಿದೆ.

ಈ ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶವನ್ನು ಬಯೋಡೈವರ್​​​ಸಿಟಿ ಪಾರ್ಕ್​​​​ ಎಂದೂ ಸರ್ಕಾರ ಪರಿಗಣಿಸಿದೆ. ಬೆಟ್ಟಗುಡ್ಡಗಳ ತುತ್ತ ತುದಿಯಲ್ಲಿ ಯೋಗಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯವಿದೆ. ಇಲ್ಲಿಗೆ ಬರುವ ಭಕ್ತರು ಮತ್ತು ಇಲ್ಲಿನ ಪರಿಸರವನ್ನು ಕಣ್ ತುಂಬಿಕೊಳ್ಳಲು ಪ್ರವಾಸಿಗರು ನಿರಂತರವಾಗಿ ಭೇಟಿ ಕೊಡುತ್ತಾರೆ. ಈ ಅರಣ್ಯ ಪ್ರದೇಶವು ಜೀವವೈವಿದ್ಯತೆಯನ್ನು ಹೊಂದಿದೆ. ಅನೇಕ ವರ್ಷಗಳ ಹಿಂದೆ ಜಪಾನ್ ನೆರವಿನಿಂದ ಮೂಲಿಕೆ ವನ ಎಂಬ ಯೋಜನೆ ಜಾರಿಗೆ ತರಲಾಗಿತ್ತು. ಹೀಗಾಗಿ ಇಲ್ಲಿರೋ ಜೀವವೈವಿದ್ಯತೆಯ ಸಂರಕ್ಷಣೆ ಆಗಬೇಕಿದೆ ಎಂಬುದು ಪರಿಸರವಾದಿಗಳ ಆಶಯವಾಗಿದೆ.

ದೇವರಾಯನದುರ್ಗ ಎಂಬ ಅರಣ್ಯ ರಾಶಿ

ಇದಲ್ಲದೆ ಕೊರಟಗೆರೆ ತಾಲೂಕಿನಲ್ಲಿರೋ ಸಿದ್ದರಬೆಟ್ಟ ಕೂಡ ಅಪಾರ ಪ್ರಮಾಣದ ಔಷಧೀಯ ಸಸ್ಯಗಳ ಆಗರವಾಗಿದೆ. ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಈ ಬೆಟ್ಟವನ್ನು ಹತ್ತಿದರೆ ಎಲ್ಲೆಂದರಲ್ಲಿ ಆಯುರ್ವೇದಿಕ್ ಔಷಧೀಯ ಗುಣಗಳುಳ್ಳ ಮರಗಿಡಗಳು ಕಾಣಸಿಗುತ್ತವೆ. ಇಲ್ಲಿ 900 ಔಷಧೀಯ ಸಸ್ಯಗಳಿವೆ. ಸುಮಾರು 6,600 ಅಡಿ ಎತ್ತರದವರೆಗೂ ಚಾಚಿಕೊಂಡಿದೆ. ಶತಮಾನಗಳಿಂದಲೂ ಈ ಸಿದ್ದರಬೆಟ್ಟ ಹಲವು ಔಷಧೀಯ ಗುಣಗಳ ಸಸ್ಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಜತನದಿಂದ ಕಾಪಾಡಿಕೊಂಡು ಬಂದಿದೆ.

ಈ ಬೆಟ್ಟ ಸಂಜೀವಿನಿ ಬೆಟ್ಟ ಮತ್ತು ರಸ ಸಿದ್ದರಬೆಟ್ಟ ಎಂಬ ನಾಮಾಂಕಿತದಿಂದ ಪ್ರಚಲಿತಗೊಂಡಿದೆ. ಈ ಗಿರಿ ಶಿಖರದಲ್ಲಿ ಸಂಜೀವಿನಿ ಕೂಡ ಇದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಸಂಜೀವಿನಿ ಬೆಟ್ಟ ಎಂದು ಕರೆಯಲಾಗುತ್ತಿದೆ. ಈ ಸಿದ್ದರಬೆಟ್ಟದ ಕುರಿತು ಅಧ್ಯಯನ ನಡೆಸಿರುವಂತಹ ಕೇಂದ್ರ ಸರ್ಕಾರದ ವಿಶೇಷ ವೈದ್ಯರ ತಂಡ, ಈ ಗಿರಿಶಿಖರ ಒಂದರಲ್ಲೇ 900 ಅಪರೂಪದ ಔಷಧೀಯ ಗುಣ ಹೊಂದಿದ ಸಸ್ಯಗಳಿವೆ ಎಂದು ಘೋಷಿಸಿದೆ.

ದೇವರಾಯನದುರ್ಗ ಎಂಬ ಅರಣ್ಯ ರಾಶಿ

ಅಲ್ಲದೇ ಇನ್ನಷ್ಟು ಔಷಧೀಯ ಗುಣ ಹೊಂದಿದ ಸಸ್ಯಗಳ ಕುರಿತು ನಿರಂತರವಾಗಿ ಅಧ್ಯಯನ ನಡೆಸುತ್ತಿದೆ. ನಿತ್ಯ ಇಲ್ಲಿಗೆ ಬರುವಂತಹ ಭಕ್ತರು ಹಾಗೂ ಕೆಲವು ಪಾರಂಪರಿಕ ವೈದ್ಯರು ಇಲ್ಲಿರುವಂತಹ ಔಷಧೀಯ ಸಸ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕೆಲ ರೈತರು ತಮ್ಮ ಜಾನುವಾರುಗಳ ಮತ್ತು ಕುರಿ ಮೇಕೆಗಳಿಗೆ ಪೂರಕವಾದಂತಹ ಔಷಧೀಯ ಸಸ್ಯಗಳ ಎಲೆಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಬೆಟ್ಟದಲ್ಲಿ ಮಧುನಾಶಿನಿ, ನೇಪಥ್ಯಕ್ಕೆ ಸರಿಯುತ್ತಿರುವ ಜಾಲಾರಿ ಗಿಡ, ಬಹು ಮುಖ್ಯವಾಗಿ ಕ್ಯಾನ್ಸರ್ ರೋಗ ನಿವಾರಿಸುವಂತಹ ಬಗೆ ಬಗೆಯ ಸಸ್ಯರಾಶಿ ಇರುವುದನ್ನು ಕಾಣಬಹುದಾಗಿದೆ.

ABOUT THE AUTHOR

...view details