ಕರ್ನಾಟಕ

karnataka

ETV Bharat / state

ಕೋವಿಡ್ ಎಫೆಕ್ಟ್ : ಒಂದನೇ ತರಗತಿಗೆ ಮಕ್ಕಳ ದಾಖಲಾತಿಯಲ್ಲಿ ಕುಸಿತ - ತುಮಕೂರು ಶೈಕ್ಷಣಿಕ ವರ್ಷದ ದಾಖಲಾತಿ ವರದಿ

ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ನಷ್ಟದಿಂದ ಶಾಲೆಯ ಶುಲ್ಕ ಕಟ್ಟಲು ಸಾಧ್ಯವಾಗದೇ ಒಂದು ವರ್ಷ ಬಿಟ್ಟು ಮಗುವನ್ನು ಶಾಲೆಗೆ ಸೇರಿಸಿದರಾಯಿತು ಎಂಬ ಪೋಷಕರ ಧೋರಣೆ ಮತ್ತು ಚಿಕ್ಕ ಮಕ್ಕಳಿಗೆ ಕೋವಿಡ್ ಎಲ್ಲಿ ತಗಲುತ್ತದೋ ಎಂಬ ಭಯ. ಈ ಎರಡೂ ಕಾರಣದಿಂದ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಹಿಂದೇಟು ಹಾಕುತಿದ್ದಾರೆ..

tumkur-district
ಒಂದನೇ ತರಗತಿಗೆ ಮಕ್ಕಳ ದಾಖಲಾತಿ

By

Published : Aug 10, 2021, 7:51 PM IST

ತುಮಕೂರು :ಜಿಲ್ಲೆಯಲ್ಲಿ ಒಂದನೇ ತರಗತಿ ದಾಖಲಾತಿ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಸುಮಾರು 8ರಿಂದ 10 ಸಾವಿರ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಶೈಕ್ಷಣಿಕ ಕ್ಷೇತ್ರದ ಮೇಲೆ ಆಗುತ್ತಿರುವ ಕೋವಿಡ್ ಪರಿಣಾಮವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯ ಎರಡು ಶೈಕ್ಷಣಿಕ ಕ್ಷೇತ್ರಗಳಾದ ತುಮಕೂರು ಹಾಗೂ ಮಧುಗಿರಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 8 ಸಾವಿರಕ್ಕೂ ಹೆಚ್ಚು ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆದಿಲ್ಲ. ಮಕ್ಕಳನ್ನು ದಾಖಲು ಮಾಡುವಲ್ಲಿ ಪೋಷಕರು ಹಿಂದೆ ಸರಿದಿದ್ದಾರೆಯೇ? ಎಂಬ ಆತಂಕ ಎದುರಾಗಿದೆ.

ಕೋವಿಡ್​ನಿಂದಾಗಿ ಹಿಂದಿನ ವರ್ಷದ ದಾಖಲಾತಿ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುತ್ತಲೇ ಸಾಗಿತ್ತು. ಆದರೆ, ಈ ಬಾರಿ ಕುಸಿತ ಕಂಡಿದೆ.

ತುಮಕೂರು ಜಿಲ್ಲೆಯಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿಯಲ್ಲಿ ಕುಸಿತ

8 ಸಾವಿರಕ್ಕೂ ಹೆಚ್ಚು ದಾಖಲಾಗಿ ಕಡಿಮೆ :ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ 2020-21ನೇ ಸಾಲಿನಲ್ಲಿ ಒಂದನೇ ತರಗತಿಗೆ 34,272 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರೆ, 2021-22ನೇ ಸಾಲಿನಲ್ಲಿ 25,921 ಮಕ್ಕಳು ದಾಖಲಾಗಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 8 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ದಾಖಲಾತಿ ಕಡಿಮೆಯಾದಂತಾಗಿದೆ. ಜನಸಂಖ್ಯೆ ಹೆಚ್ಚಳದಿಂದಾಗಿ ಪ್ರವೇಶಾತಿ ಪ್ರಮಾಣವೂ ಪ್ರತಿ ಶೈಕ್ಷಣಿಕ ವರ್ಷದಲ್ಲೂ ಏರುತ್ತಲೇ ಇರುತಿತ್ತು. ಆದರೆ, ಈ ಸಲ ಅದು ಕುಸಿದಿರುವುದು ಕಂಡು ಬರುತ್ತಿದೆ.

ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ದಾಖಲಾತಿ ಕುಸಿತ:ಖಾಸಗಿ ಅಥವಾ ಸರ್ಕಾರಿ ಯಾವುದಾದರೊಂದು ಶಾಲೆಯಲ್ಲಿ ಮಗು ಕಲಿಯುತಿತ್ತು. ಆದರೆ, ಈ ಸಲ ಎರಡೂ ಕಡೆ ಪ್ರವೇಶ ಕಡಿಮೆಯಾಗಿದೆ. 2021-22ನೇ ಸಾಲಿನಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳಿಗೆ 13,924 ಮಕ್ಕಳು ದಾಖಲಾಗಿದ್ದರೆ, ಈ ವರ್ಷ 6,326 ಮಕ್ಕಳು ಪ್ರವೇಶ ಪಡೆದಿದ್ದಾರೆ. ಈ ಎರಡು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಏರಿಕೆ ಕಂಡಿಲ್ಲ.

ಪೋಷಕರು ಕೋವಿಡ್​ ಭೀತಿ:ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ನಷ್ಟದಿಂದ ಶಾಲೆಯ ಶುಲ್ಕ ಕಟ್ಟಲು ಸಾಧ್ಯವಾಗದೇ ಒಂದು ವರ್ಷ ಬಿಟ್ಟು ಮಗುವನ್ನು ಶಾಲೆಗೆ ಸೇರಿಸಿದರಾಯಿತು ಎಂಬ ಪೋಷಕರ ಧೋರಣೆ ಮತ್ತು ಚಿಕ್ಕ ಮಕ್ಕಳಿಗೆ ಕೋವಿಡ್ ಎಲ್ಲಿ ತಗಲುತ್ತದೋ ಎಂಬ ಭಯ. ಈ ಎರಡೂ ಕಾರಣದಿಂದ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಹಿಂದೇಟು ಹಾಕುತಿದ್ದಾರೆ.

ಆರ್ಥಿಕ ಸಂಕಷ್ಟ:ಅಲ್ಲದೆ, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಬಡ ವರ್ಗದ ಜನರು, ಕೂಲಿ ಕಾರ್ಮಿಕರು, ದಿನದ ದುಡಿಮೆ ನಂಬಿದವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಆ ಹೊರೆಯನ್ನೂ ಹೊರ ಬೇಕಾಗುತ್ತದೆ. ಅದರ ಬದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರೆ ಸಹಕಾರಿಯಾಗುತ್ತದೆ ಎಂಬ ಭಾವನೆ ಪೋಷಕರಲ್ಲಿ ಮೂಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

For All Latest Updates

ABOUT THE AUTHOR

...view details