ಕರ್ನಾಟಕ

karnataka

ETV Bharat / state

ರಾತ್ರಿ ಕೊರೊನಾ ಪಾಸಿಟಿವ್​, ಬೆಳಗ್ಗೆ ಸಾವು.. ತುಮಕೂರಿನಲ್ಲಿ ಸೋಂಕಿಗೆ ವ್ಯಕ್ತಿ ಬಲಿ - ಕೊರೊನಾದಿಂದ ಸಾವು

ಕೊರೊನಾ ಸೋಂಕು ಇರುವುದಾಗಿ ನಿನ್ನೆ ರಾತ್ರಿ ದೃಢಪಟ್ಟಿದ್ದ ವ್ಯಕ್ತಿಯೊಬ್ಬ ಇಂದು ಬೆಳಗ್ಗೆ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಲ್ಲಿ ಕೊರೊನಾಗೆ ಕೊನೆಯುಸಿರೆಳೆದ ವ್ಯಕ್ತಿ
ತುಮಕೂರಲ್ಲಿ ಕೊರೊನಾಗೆ ಕೊನೆಯುಸಿರೆಳೆದ ವ್ಯಕ್ತಿ

By

Published : Mar 27, 2020, 1:29 PM IST

ತುಮಕೂರು: ನಗರದಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಶಿರಾ ಮೂಲದ ವ್ಯಕ್ತಿ

ಮೃತಪಟ್ಟಿದ್ದಾನೆ.

ಇಂದು ಬೆಳಗ್ಗೆ 10.40ಕ್ಕೆ ಸೋಂಕಿತ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ರಾತ್ರಿ ಇವರ ವರದಿಯಲ್ಲಿ ಪಾಸಿಟಿವ್ ಕಂಡು ಬಂದಿತ್ತು. ಮಾ.23 ರಿಂದಲೂ ವ್ಯಕ್ತಿಯು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಿರಾಗೆ ತೆರಳಿದ್ದರು. ಮಾ.24ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಅವರ ಸ್ಯಾಂಪಲ್ ಗಳನ್ನು ತೆಗೆದುಕೊಳ್ಳಲಾಗಿತ್ತು. ಅಲ್ಲದೆ ಐಸೋಲೇಷನ್ ವಾರ್ಡ್ ನಲ್ಲಿ ದಾಖಲಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಇವರ ಚಲನ ವಲನ...

ಮಾ 5ರಂದು ತುಮಕೂರಿನ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ 13 ಜನರೊಂದಿಗೆ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನ ಮೂಲಕ ತೆರಳಿದ್ದರು. ಮಾರ್ಚ್ 7ರಂದು ಮಧ್ಯಾಹ್ನ 3 ಗಂಟೆಗೆ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ತಲುಪಿದ್ದರು. ಅಲ್ಲಿಂದ ಟ್ಯಾಕ್ಸಿಯಲ್ಲಿ ಜಾಮಿಯಾ ಮಸೀದಿಗೆ ಹೋಗಿದ್ದರು.

ಮಾರ್ಚ್ 7 ರಿಂದ 11ರವರೆಗೆ ಲಾಡ್ಜ್ ದೊರೆಯದ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿಯಲ್ಲಿ ತಂಗಿದ್ದರು. ಮಾರ್ಚ್ 14ರಂದು ವಾಪಸ್ ರೈಲಿನಲ್ಲಿ ಬೆಳಗ್ಗೆ 12.30ಕ್ಕೆ ಯಶವಂತ ಪುರ ತಲುಪಿದ್ದರು. ಅಲ್ಲಿಂದ ಚಿತ್ರದುರ್ಗ ಮಾರ್ಗದ ಬಸ್ ನಲ್ಲಿ ಮಾ.14ರಂದು ಶಿರಾ ತಲುಪಿದ್ದರು.

ಇದಾದ ನಂತರ ಕೆಲ ದಿನಗಳ ಕಾಲ ಮನೆಯಲ್ಲಿದ್ದರು. ಮಾ.18ರಂದು ಕೆಮ್ಮು ನೆಗಡಿ ಕಾಣಿಸಿಕೊಂಡಿತ್ತು. ಮಾ.21ರಂದು ಸ್ಥಳೀಯ ಖಾಸಗಿ ವೈದ್ಯರ ಬಳಿ ಪರೀಕ್ಷಿಸಿದ್ರು. ಮಾರ್ಚ್ 23ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಶಿರಾಗೆ ತೆರಳಿದ್ದರು. ವಾಪಸ್ 24ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ರಕ್ತ ಮತ್ತು ಕಫದ ಪರೀಕ್ಷೆ ನಡೆಸಲಾಗಿತ್ತು. ಇವರ ಸಂಪರ್ಕದಲ್ಲಿದ್ದ ಎಲ್ಲರಿಗೂ ಹೋಮ್ ಕ್ವಾರಂಟೈನ್​ ನಲ್ಲಿಡಲಾಗಿದೆ. ಇವರ ಜೊತೆ ಸಂಪರ್ಕದಲ್ಲಿದ್ದ 33ಜನರ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ABOUT THE AUTHOR

...view details