ತುಮಕೂರು: ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಕಲೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ತಿಪಟೂರಿನಲ್ಲಿ ಚಿತ್ರದ ನಾಯಕ ಡಾಲಿ ಧನಂಜಯ್ ಅವರ ಕಟೌಟ್ಗೆ ಮಸಿ ಬಳಿದು, ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಲಕ್ಷ್ಮಿ ಚಲನಚಿತ್ರ ಮಂದಿರದ ಬಳಿ ನಿಲ್ಲಿಸಲಾಗಿದ್ದ ಕಟೌಟ್ ನೆಲಕ್ಕುರುಳಿಸಿ, ಮಸಿ ಬಳಿಯಲಾಗಿದೆ. ಅಲ್ಲದೇ ವೀರಗಾಸೆ ಕಲೆಗೆ ಅವಮಾನ ಮಾಡಿರುವ ಅಂಶವನ್ನು ಸಿನಿಮಾದಿಂದ ತೆಗೆದು ಹಾಕಬೇಕು ಹಾಗೂ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವೀರಗಾಸೆ ಕಲೆಗೆ ಅವಮಾನ ಮಾಡಿದ ಆರೋಪ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು: ಇತ್ತ ಹೆಡ್‌ಬುಷ್ ಚಿತ್ರದ ವಿರುದ್ಧ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಕೂಡಾ ಆಕ್ರೋಶ ವ್ಯಕ್ತಪಡಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿಗೆ ದೂರು ನೀಡಿದೆ.
ಅಭೂತಪೂರ್ವ ಕಲೆಗೆ ಲಿಂಗದ ವೀರರು ಶಕ್ತಿ ತುಂಬಿ ನಡೆಸಿಕೊಂಡು ಬಂದಿದ್ದಾರೆ. ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಡಾಲಿ ಧನಂಜಯ ಕಾಲಿಂದ ಒದೆಯುವ ದೃಶ್ಯವಿದೆ. ಕೂಡಲೇ ಇಡೀ ಚಿತ್ರತಂಡ ವೀರಶೈವ ಸಮಾಜ, ಲಿಂಗದ ವೀರರು, ವೀರಗಾಸೆ ಕಲಾವಿದರು ಹಾಗೂ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕರಗ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪ: 'ಹೆಡ್ ಬುಷ್' ವಿರುದ್ಧ ದೂರು