ತುಮಕೂರು :ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಬಿಸಾಡಿದ್ದ ಸುಮಾರು ಮೂರು ಅಡಿ ಉದ್ದ ಕೊಳಕುಮಂಡಲ ಹಾವನ್ನು ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟ ಘಟನೆ ನಗರದಲ್ಲಿ ನಡೆದಿದೆ.
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೊಳಕುಮಂಡಲ ಹಾವಿನ ರಕ್ಷಣೆ - ತುಮಕೂರು ಕೊಳಕುಮಂಡಲ ಹಾವಿನ ರಕ್ಷಣೆ
ಪಟ್ಟಣದ ಅಕ್ಕ-ತಂಗಿ ಪಾರ್ಕ್ ಸಮೀಪ ಪ್ಲಾಸ್ಟಿಕ್ ಚೀಲವೊಂದರಲ್ಲಿ ಕೊಳಕು ಕಮಂಡಲ ಹಾವನ್ನು ಬಿಗಿಯಾಗಿ ಕಟ್ಟಿ ಬಿಸಾಡಿದ್ದರು. ಚೀಲವನ್ನು ಕಂಡ ಪೌರ ಕಾರ್ಮಿಕರು ವಾರಂಗಲ್ ಅರ್ ವನ್ಯಜೀವಿ ಜಾಗೃತ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು..
ಕೊಳಕುಮಂಡಲ ಹಾವಿನ ರಕ್ಷಣೆ
ಪಟ್ಟಣದ ಅಕ್ಕ-ತಂಗಿ ಪಾರ್ಕ್ ಸಮೀಪ ಪ್ಲಾಸ್ಟಿಕ್ ಚೀಲವೊಂದರಲ್ಲಿ ಕೊಳಕು ಕಮಂಡಲ ಹಾವನ್ನು ಬಿಗಿಯಾಗಿ ಕಟ್ಟಿ ಬಿಸಾಡಿದ್ದರು. ಚೀಲವನ್ನು ಕಂಡ ಪೌರ ಕಾರ್ಮಿಕರು ವಾರಂಗಲ್ ಅರ್ ವನ್ಯಜೀವಿ ಜಾಗೃತ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಸಂಸ್ಥೆಯ ಉರಗತಜ್ಞ ದಿಲೀಪ್ ಚೀಲದಲ್ಲಿದ್ದ ಹಾವನ್ನು ರಕ್ಷಣೆ ಮಾಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ.