ತುಮಕೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಮೃತದೇಹವೊಂದಕ್ಕೆ ಶವಸಂಸ್ಕಾರ ಮಾಡಲು ಕೆಲಕಾಲ ಬೇರೊಂದು ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ತುಮಕೂರು ಹೊರವಲಯದ ಭೀಮಸಂದ್ರದಲ್ಲಿ ನಡೆದಿದೆ.
ಮಂಜುನಾಥ್(50) ಎಂಬುವರು ಮೃತಪಟ್ಟಿದ್ದು, ಮೃತದೇಹವನ್ನು ಭೀಮಸಂದ್ರದ ಸರ್ವೆ ನಂಬರ್ 16ರಲ್ಲಿ ಇದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರು ಶವ ಹೊತ್ತು ತಂದಿದ್ದು, ಗುಂಡಿಯನ್ನೂ ತೋಡಿದ್ದರು. ಆದರೆ, ಸೌಭಾಗ್ಯ ಎಂಬುವವರು ತಮ್ಮ ಕುಟುಂಬದೊಂದಿಗೆ ಬಂದು, ಜಾಗ ತಮ್ಮದೆಂದು ವಾದಿಸಿದರು. ಈ ವೇಳೆ, ಪರಸ್ಪರ ಗಲಾಟೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ