ತುಮಕೂರು:ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ವಿಳಂಬವಾದರೆ ಅವರ ಸಂಬಂಧಿಕರು ತುಮಕೂರಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ.
ಬೆಂಗಳೂರಲ್ಲಿ ಮೃತಪಟ್ಟ ಕೋವಿಡ್ ಸೋಂಕಿತರಿಗೆ ತುಮಕೂರಲ್ಲಿ ಅಂತ್ಯಕ್ರಿಯೆ - Tumkur corona death
ಬೆಂಗಳೂರಲ್ಲಿ ಕೊರೊನಾ 2ನೇ ಅಲೆ ಆರಂಭವಾದಾಗಿನಿಂದಲೂ ಈವರೆಗೆ 16ಕ್ಕೂ ಹೆಚ್ಚು ಶವಗಳನ್ನು ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ಶವಾಗಾರದಲ್ಲಿ ದಹನ ಮಾಡಲಾಗಿದೆ.
ಬೆಂಗಳೂರಲ್ಲಿ ಮೃತಪಟ್ಟ ಕೋವಿಡ್ ಸೋಂಕಿತರಿಗೆ ತುಮಕೂರಲ್ಲಿ ಅಂತ್ಯಕ್ರಿಯೆ
ಕೊರೊನಾ 2ನೇ ಅಲೆ ಆರಂಭವಾದಾಗಿನಿಂದಲೂ ಇದುವರೆಗೂ 16ಕ್ಕೂ ಹೆಚ್ಚು ಶವಗಳನ್ನು ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ಶವಾಗಾರದಲ್ಲಿ ದಹನ ಮಾಡಲಾಗಿದೆ. ಬೆಂಗಳೂರು-ತುಮಕೂರು ನಡುವೆ ಸುಮಾರು 1.45 ಗಂಟೆ ಪ್ರಯಾಣವಿದ್ದು, ಸುಲಭವಾಗಿ ಮೃತದೇಹಗಳನ್ನು ತುಮಕೂರಿಗೆ ತರಬಹುದಾಗಿದೆ.
ಅಲ್ಲದೆ ತುಮಕೂರಿನ ಬಹುತೇಕ ಸೋಂಕಿತರು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಅಂತಹ ಶವಗಳನ್ನು ಸಹ ತುಮಕೂರು ನಗರಕ್ಕೆ ತಂದು ಅಂತ್ಯಕ್ರಿಯೆ ಮಾಡುತ್ತಿದ್ದಾರೆ.