ತುಮಕೂರು:ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ರಕ್ಷಿಸಿರುವ ಘಟನೆ ತಿಪಟೂರು ತಾಲೂಕು ಈಚನೂರು ಗ್ರಾಮದ ಬಳಿ ನಡೆದಿದೆ.
ಕಸಾಯಿಖಾನೆಗೆ ಸಾಗಿಸ್ತಿದ್ದ ಜಾನುವಾರುಗಳ ರಕ್ಷಣೆ, ಪ್ರಕರಣ ದಾಖಲು - undefined
ತಿಪಟೂರಿನಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ರಕ್ಷಿಸಿದ್ದಾರೆ
Tumkur
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕಸಾಯಿಖಾನೆಗೆ ತಿಪಟೂರಿನಿಂದ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ವಿಷಯ ತಿಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ವಾಹನವನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ವಾಹನದಲ್ಲಿ 13 ಜಾನುವಾರುಗಳು ಇರುವುದು ಪತ್ತೆಯಾಗಿದೆ.
ಕಾರ್ಯಕರ್ತರು ತಿಪಟೂರು ಗ್ರಾಮಾಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಾಹನದಲ್ಲಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ