ತುಮಕೂರು:ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹಟ್ಟಿಯಲ್ಲಿ ನಡೆದಿದೆ. ಮುನಿಯಪ್ಪ ಮತ್ತು ಕರಿಯಮ್ಮ ಎಂಬವರಿಗೆ ಸೇರಿದ ಈ ಹಸು 3 ಗಂಡು ಮತ್ತು 1 ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚೇಳೂರು ಪಶು ವೈದ್ಯಾಧಿಕಾರಿ ಡಾ. ಶಂಕರಪ್ಪ ತಪಾಸಣೆ ನಡೆಸಿದರು. ಒಂದು ಗಂಡು ಕರು ಹುಟ್ಟಿದ ತಕ್ಷಣ ಮೃತಪಟ್ಟಿದೆ. ಮೂರು ಕರುಗಳು ಆರೋಗ್ಯವಾಗಿವೆ ಎಂದು ಅವರು ತಿಳಿಸಿದರು.
ಗದಗ್ನಲ್ಲೂ ಇಂಥದ್ದೇ ಘಟನೆ :ಕೆಲವು ದಿನಗಳ ಹಿಂದೆ ಗದಗ ಜಿಲ್ಲೆಯಲ್ಲೂ ಹಸುವೊಂದು ಮೂರು ಕರುಗಳಿಗೆ ಜನ್ಮ ಕಟ್ಟಿತ್ತು. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಖಾದೀರ್ ಸಾಬ್ ನದಾಫ್ ಎಂಬ ರೈತನ ಹಸು ತ್ರಿವಳಿ ಕರುಗಳನ್ನು ಹಾಕಿತ್ತು. ಲಕ್ಷ್ಮೀ ಎಂಬ ಹೆಸರಿನ ಜರ್ಸಿ ತಳಿ ಇದು.
ಚಿತ್ರದುರ್ಗದ ಘಟನೆ :ಚಿತ್ರದುರ್ಗದ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿಯಲ್ಲಿಹಸುವೊಂದು ಮೂರು ಹೆಣ್ಣು ಕರುಗಳಿಗೆ ಇತ್ತೀಚೆಗೆ ಜನ್ಮ ನೀಡಿತ್ತು. ಮಲ್ಲಪ್ಪನಹಳ್ಳಿ ಗ್ರಾಮದ ಮೂರ್ಕಣಪ್ಪ ಎಂಬವರಿಗೆ ಸೇರಿದ ಹಸು ಇದಾಗಿತ್ತು. ಮೂರು ಕರುಗಳು ಒಂದೇ ದಿನ 5 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿದ್ದವು.