ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೆಡರಲ್​ ಮೆಲನಿನ್​ ರೋಗ..ಈ ಬಗ್ಗೆ ಶಾಸಕರು ಏನಂತಾರೆ? - tumkur news

ಜಿಲ್ಲೆಯ ಜಾನುವಾರುಗಳು ಕಳೆದ ಐದು ವರ್ಷಗಳಿಂದ ಕೆಡರಲ್​ ಮೆಲನಿನ್ ರೋಗದಿಂದ ಸಾವಿಗೀಡಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ತುಮಕೂರಿನಲ್ಲಿ ಕಾಲುಬಾಯಿ ಭೀಕರ ಕಾಯಿಲೆಗೆ ಬಲಿಯಾಗುತ್ತವೆ ರಾಸುಗಳು!

By

Published : Oct 26, 2019, 12:19 PM IST

Updated : Oct 26, 2019, 4:41 PM IST

ತುಮಕೂರು:ಜಿಲ್ಲೆಯ ಜಾನುವಾರುಗಳು ಕಳೆದ ಐದು ವರ್ಷಗಳಿಂದ ಕೆಡರಲ್​ ಮೆಲನಿನ್ ರೋಗದಿಂದ ಸಾವಿಗೀಡಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ತುಮಕೂರಿನಲ್ಲಿ ಕೆಡರಲ್​ ಮೆಲನಿನ್​ ಕಾಯಿಲೆಗೆ ಬಲಿಯಾಗುತ್ತಿವೆ ರಾಸುಗಳು!

ಈ ಕುರಿತು ಮಾತನಾಡಿದ ಕುಣಿಗಲ್ ಶಾಸಕ ಡಾ.ರಂಗನಾಥ್, ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರು, ಮೋದೂರು ಗ್ರಾಮಗಳಲ್ಲಿನ ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, 5 ವಷರ್ದಲ್ಲಿ ಈ ರೋಗದಿಂದ 50 ರಿಂದ 60 ಹಸುಗಳು ಸಾಯುತ್ತಿವೆ. ಎರಡೂ ಗ್ರಾಮಗಳಲ್ಲಿರುವ ಹಸುಗಳಿಗೆ ಶೇ.100 ವಿಮೆ ಮಾಡಿಸಿಕೊಟ್ಟಿದ್ದೇನೆ. ಈ ಬಗ್ಗೆ ಪಶಸಂಗೋಪನಾ ಇಲಾಖೆಯ ಮಂತ್ರಿಗಳ ಗಮನಕ್ಕೂ ತಂದಿದ್ದೇವೆ ಹಾಗೂ ವಿಧಾನಸೌಧದಲ್ಲೂ ಈ ಬಗ್ಗೆ ಮಾತನಾಡಿದ್ದೇನೆ ಎಂದರು.

ಇನ್ನು, ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್​ ಮಾತನಾಡಿ, ಕುರಿ ಮತ್ತು ಮೇಕೆಗಳಿಂದ ಕೆಡರಲ್​ ಮೆಲನಿನ್ ಕಾಯಿಲೆ ಹರಡುತ್ತಿದೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ಕಾಯಿಲೆ ಬಂದ್ರೆ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಕುರಿ ಮತ್ತು ಮೇಕೆಗಳನ್ನು ಜಾನುವಾರುಗಳಿಂದ ದೂರ ಇರಿಸುವಂತೆ ಸಲಹೆ ನೀಡಲಾಗುತ್ತಿದೆ. ಎಲ್ಲಾ ಹಸುಗಳಿಗೆ ಇನ್ಸೂರೆನ್ಸ್ ಮಾಡಿಸಲಾಗಿದೆ. ಈ ಕಾಯಿಲೆಗಳಿಂದ ಮೃತಪಟ್ಟಿರುವ 35 ಜಾನುವಾರುಗಳಿಗೆ 14 ಲಕ್ಷ ರೂ. ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Last Updated : Oct 26, 2019, 4:41 PM IST

ABOUT THE AUTHOR

...view details