ಕರ್ನಾಟಕ

karnataka

ETV Bharat / state

ಹೊರ ಜಿಲ್ಲೆಯಿಂದ ತುಮಕೂರಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ; ಡಿಸಿ ವೈ ಎಸ್‌ ಪಾಟೀಲ್‌ - ಬೇರೆ ಜಿಲ್ಲೆಯ ಸೋಂಕಿತರಿಗೆ ತುಮಕೂರಿನಲ್ಲಿ ಚಿಕಿತ್ಸೆ

ಕೊರೊನಾ ಸೋಂಕಿತರು ಎಂದು ಮೊದಲಿಗೆ ಬಂದು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಪ್ರಾರಂಭಿಕ ಹಂತದಲ್ಲಿನ ಚಿಕಿತ್ಸೆ ನೀಡಲು ಸರ್ವ ವ್ಯವಸ್ಥೆಯನ್ನು ತಾಲೂಕು ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ..

dc
dc

By

Published : May 5, 2021, 5:26 PM IST

Updated : May 5, 2021, 8:58 PM IST

ತುಮಕೂರು: ಹೊರ ಜಿಲ್ಲೆಗಳಿಂದ ಸೋಂಕಿತರು ತುಮಕೂರು ಜಿಲ್ಲೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದು ಅವರುಗಳಿಗೆ ಚಿಕಿತ್ಸೆ ನಿರಾಕರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಪ್ರತಿದಿನ ಪತ್ತೆ ಆಗುತ್ತಿರುವ ಸೋಂಕಿತರ ಪ್ರಮಾಣಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಹಾಸಿಗೆಗಳ ಹಾಗೂ ಆಕ್ಸಿಜನ್ ಉಳಿಯಬೇಕಿದೆ. ಆದರೆ, ಚಿತ್ರದುರ್ಗ ನೆಲಮಂಗಲ ರಾಮನಗರ ಹಾಗೂ ಬೆಡ್ ಸಿಗದೆ ಬೆಂಗಳೂರಿನಿಂದಲೂ ಸೋಂಕಿತರು ಇಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ, ತುಮಕೂರು ಜಿಲ್ಲೆಗೆ ಇದು ಒಂದು ರೀತಿ ಒತ್ತಡ ನಿರ್ಮಾಣವಾಗಿದೆ.

ಡಿಸಿ ವೈ ಎಸ್‌ ಪಾಟೀಲ್‌

ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ನಿರಾಕರಿಸಲು ಸಾಧ್ಯವಿಲ್ಲ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 30 ರಿಂದ 50 ಬೆಡ್‌ಗಳೊಂದಿಗೆ ಆಕ್ಸಿಜನ್ ಲಭ್ಯವಿದೆ ಎಂದು ವೈ ಎಸ್ ಪಾಟೀಲ್ ತಿಳಿಸಿದ್ದಾರೆ.

ಕೊರೊನಾ ಸೋಂಕಿತರು ಎಂದು ಮೊದಲಿಗೆ ಬಂದು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಪ್ರಾರಂಭಿಕ ಹಂತದಲ್ಲಿನ ಚಿಕಿತ್ಸೆ ನೀಡಲು ಸರ್ವ ವ್ಯವಸ್ಥೆಯನ್ನು ತಾಲೂಕು ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Last Updated : May 5, 2021, 8:58 PM IST

ABOUT THE AUTHOR

...view details