ಕರ್ನಾಟಕ

karnataka

ETV Bharat / state

ಗ್ರಾಮಸ್ಥರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ ವೈದ್ಯ - ಗ್ರಾಮಸ್ಥರಲ್ಲಿ ಕೊರೊನಾ ಜಾಗೃತಿ

ತುಮಕೂರು ಜಿಲ್ಲೆ ಪಾವಗಡ ಬಳಿಯ ದೊಮ್ಮತಮರಿ ಗ್ರಾಮದಲ್ಲಿ ಕೊರೊನಾ ಸೋಂಕಿನ ಕುರಿತು ವೈದ್ಯ ಶ್ರೀಕಾಂತ್ ಜಾಗೃತಿ ಮೂಡಿಸುವುದರ ಜೊತೆಗೆ ಮಾಸ್ಕ್​, ಸ್ಯಾನಿಟೈಸರ್​ಗಳನ್ನು ವಿತರಿಸಿದರು. ಕೊರೊನಾ ಸೋಂಕಿತ ವೈದ್ಯರೊಬ್ಬರು ಈ ಗ್ರಾಮಸ್ಥರಿಗೆ ಇತ್ತೀಚೆಗೆ ಚಿಕಿತ್ಸೆ ನೀಡಿದ್ದರು.

corona virus awareness by doctors in tumkur
ಗ್ರಾಮಸ್ಥರಲ್ಲಿ ಕೊರೊನಾ ಜಾಗೃತಿ ಮೂಡಿದ ವೈದ್ಯ

By

Published : Apr 8, 2020, 5:21 PM IST

ತುಮಕೂರು: ಪಾವಗಡದಲ್ಲಿ ಕೊರೊನಾ ಸೋಂಕಿತ ವೈದ್ಯನಿಂದ ಚಿಕಿತ್ಸೆ ಪಡೆದ ದೊಮ್ಮತಮರಿ ಗ್ರಾಮದವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕು ಹರಡದಂತೆ ಎಲ್ಲರೂ ಜಾಗೃತರಾಗೋಣ ಎಂದು ಸನ್ ​ರೈಸ್ ಆಸ್ಪತ್ರೆ ವೈದ್ಯ ಶ್ರೀಕಾಂತ್ ಮನವಿ ಮಾಡಿದರು.

ಗ್ರಾಮಸ್ಥರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ ವೈದ್ಯ

ಹೆಲ್ಪ್​ ಸೊಸೈಟಿ ಹಾಗೂ ಸನ್ ರೈಸ್ ಆಸ್ಪತ್ರೆ ಜಂಟಿಯಾಗಿ ದೊಮ್ಮತಮರಿ ಗ್ರಾಮದ ಜನತೆಗೆ ಮಾಸ್ಕ್ ವಿತರಿಸುವ ಮೂಲಕ ಕೊರೊನಾ ತಡೆಗಟ್ಟುವ ಕರಪತ್ರ ಹಾಗೂ ಸ್ಯಾನಿಟೈಸರ್​​ಗಳನ್ನು ಹಂಚಲಾಯಿತು.

ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹೆದರಬೇಡಿ. ಅನಗತ್ಯವಾಗಿ ಬೇರೆಯವರ ಮನೆಗೆ ಹೋಗಬೇಡಿ. ರಾಜ್ಯ ಸರ್ಕಾರ ಅಕ್ಕಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ಡಾ. ಶ್ರೀಕಾಂತ್​​ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಶಶಿಕಿರಣ್ ಮಾತನಾಡಿ, ಗುಂಪು ಸೇರುವುದು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಈ ತರಹದ ಯಾವುದೇ ಚಟುವಟಿಕೆಗಳನ್ನು ಮಾಡಬೇಡಿ. ಈ 15 ದಿನ ತಾಳ್ಮೆಯಿಂದ ವರ್ತಿಸಿದರೆ ನಾವೆಲ್ಲರೂ ಮುಂದಿನ ಬದುಕು ಕಾಣಬಹುದು ಎಂದು ಹೇಳಿದರು.

ABOUT THE AUTHOR

...view details