ತುಮಕೂರು: ಕೋವಿಡ್-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಪಿ.553 ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ.
ತುಮಕೂರಲ್ಲಿ ಕೊರೊನಾದಿಂದ ಮುಕ್ತವಾದ ಮಹಿಳೆ: ಆಸ್ಪತ್ರೆಯಿಂದ ಡಿಸ್ಚಾರ್ಜ್ - tumkur hospital
ತುಮಕೂರು ನಗರದ ಪಿಎಚ್ ಕಾಲೋನಿಯ ನಿವಾಸಿಯಾಗಿದ್ದ ಪಿ.535 ಸೋಂಕಿತ ವ್ಯಕ್ತಿ ಇತ್ತೀಚಿಗೆ ಮೃತಪಟ್ಟಿದ್ದರು. ನಂತರ ಇವರ ಪತ್ನಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಿ ಪಾಸಿಟಿವ್ ಬಂದ ಹಿನ್ನೆಲೆ ಚಿಕಿತ್ಸೆ ನೀಡಲಾಗಿದ್ದು, ಇಂದು ಗುಣಮುಖರಾಗಿದ್ದಾರೆ.
![ತುಮಕೂರಲ್ಲಿ ಕೊರೊನಾದಿಂದ ಮುಕ್ತವಾದ ಮಹಿಳೆ: ಆಸ್ಪತ್ರೆಯಿಂದ ಡಿಸ್ಚಾರ್ಜ್ tumkur hospital](https://etvbharatimages.akamaized.net/etvbharat/prod-images/768-512-7237478-618-7237478-1589734991250.jpg)
ತುಮಕೂರು ನಗರದ ಪಿಎಚ್ ಕಾಲೋನಿಯ ನಿವಾಸಿಯಾಗಿದ್ದ ಪಿ. 535 ಸೋಂಕಿತ ವ್ಯಕ್ತಿ ಇತ್ತೀಚಿಗೆ ಮೃತಪಟ್ಟಿದ್ದರು. ನಂತರ ಇವರ ಪತ್ನಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ದೃಢವಾಗಿತ್ತು. ತಕ್ಷಣ ಸೋಂಕಿತ ಮಹಿಳೆ ಪಿ.553 ಯನ್ನು ತುಮಕೂರು ಕೋವಿಡ್-19 ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನಗಳ ಕಾಲ ರೋಗನಿರೋಧಕ ಚಿಕಿತ್ಸಾ ವಿಧಾನವನ್ನು ಅನುಸರಿಸಿದ್ದ ವೈದ್ಯರು, ನಂತರ 14 ದಿನಗಳ ಕಾಲ ಇಮ್ಯುನಿಟಿ ಬೋಸ್ಟ್ ಚಿಕಿತ್ಸೆಯನ್ನು ನೀಡಿದ್ದರು.
ಚಿಕಿತ್ಸೆಯ ನಂತರ ಸೋಂಕಿತ ಮಹಿಳೆಯಲ್ಲಿ ಸಾಧಾರಣ ಆರೋಗ್ಯ ಸ್ಥಿತಿ ಕಂಡು ಬಂದಿತು. ಯಾವುದೇ ಏರುಪೇರುಗಳು ಚಿಕಿತ್ಸಾ ಸಂದರ್ಭದಲ್ಲಿ ಕಂಡುಬರಲಿಲ್ಲ. ಅಲ್ಲದೇ ದಾಖಲಾದ ನಂತರ ಎರಡು ಬಾರಿ ಸ್ವ್ಯಾಬ್ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅಲ್ಲದೇ ಮುಂದಿನ 14 ದಿನಗಳ ಕಾಲ ಹೋ ಟೈಮ್ನಲ್ಲಿ ಇರುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ 'ಈಟಿವಿ ಭಾರತ'ಕ್ಕೆ ಸ್ಪಷ್ಟಪಡಿಸಿದ್ದಾರೆ.