ಕರ್ನಾಟಕ

karnataka

ETV Bharat / state

ಸಿದ್ಧಗಂಗಾ ಶ್ರೀಗಳ ಸ್ಮರಣಾರ್ಥ ನಡೆಯಬೇಕಿದ್ದ ದಾಸೋಹ ದಿನ ರದ್ದು: ಸಿದ್ದಲಿಂಗ ಸ್ವಾಮೀಜಿ - ಕೊರೊನಾ ಹಿನ್ನಲೆ ದಾಸೋಹ ದಿನ ಕಾರ್ಯಕ್ರಮ ರದ್ದು

ಜನವರಿ 21ರಂದು ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನದ ಪ್ರಯುಕ್ತ ಸರ್ಕಾರದಿಂದಲೇ ದಾಸೋಹ ದಿನ ಕಾರ್ಯಕ್ರಮ ನಡೆಯಬೇಕಿತ್ತು. ಕೋವಿಡ್​ ಹಿನ್ನೆಲೆಯಲ್ಲಿ ಮಠದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲ, ಭಕ್ತಾಧಿಗಳು ಸಹಕರಿಸುವಂತೆ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.

ಶ್ರೀ ಸಿದ್ದಲಿಂಗ ಸ್ವಾಮೀಜಿ
ಶ್ರೀ ಸಿದ್ದಲಿಂಗ ಸ್ವಾಮೀಜಿ

By

Published : Jan 11, 2022, 4:42 PM IST

ತುಮಕೂರು: ಕೋವಿಡ್ 3ನೇ ಅಲೆ ಹಿನ್ನೆಲೆಯಲ್ಲಿ ದಾಸೋಹ ದಿನದ ಅದ್ದೂರಿ ಕಾರ್ಯಕ್ರಮ ರದ್ದು ಮಾಡಲಾಗುತ್ತಿದೆ ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.


ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಠದಲ್ಲಿ ಸರಳ ಪೂಜೆ, ಉತ್ಸವ ಮಾಡಲು ನಿರ್ಧರಿಸಲಾಗಿದೆ ಎಂದರು.

ಜನವರಿ 21ರಂದು ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನ ನಡೆಯಬೇಕಿತ್ತು. ಸರ್ಕಾರದಿಂದಲೇ ದಾಸೋಹ ದಿನದ ಕಾರ್ಯಕ್ರಮ ನಡೆಯಬೇಕಿತ್ತು. ಕೋವಿಡ್​ ಕಾರಣಕ್ಕೆ ಮಠದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲ ಭಕ್ತಾಧಿಗಳು ಸಹಕರಿಸಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

For All Latest Updates

ABOUT THE AUTHOR

...view details