ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್ ಭೀತಿ.. ಮನೆಗೆ ಹೋಗಲು ಬಯಸದ ಶ್ರೀಸಿದ್ಧಗಂಗಾ ಮಠದ ಮಕ್ಕಳು.. - ಸಿದ್ದಗಂಗಾ ಮಠದಲ್ಲಿ ಕೊರೊನ ವೈರಸ್ ಭೀತಿ

ಇಡೀ ದೇಶವೇ ಲಾಕ್​​​ಡೌನ್ ಆಗಿದೆ. ಶ್ರೀ ಸಿದ್ಧಗಂಗಾ ಮಠಕ್ಕೆ ಯಾರೂ ಕೂಡ ಬರುವಂತಹ ಪ್ರಯತ್ನ ಮಾಡಬಾರದು ಎಂದು ಭಕ್ತರಲ್ಲಿ ಶ್ರೀಗಳು ಮನವಿ ಮಾಡಿದ್ದಾರೆ.

Siddhalinga Swamiji
ಸಿದ್ದಲಿಂಗ ಸ್ವಾಮೀಜಿ

By

Published : Mar 25, 2020, 9:54 AM IST

ತುಮಕೂರು :ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್​ಡೌನ್‌ ಆಗಿದೆ. ಶ್ರೀ ಸಿದ್ಧಗಂಗಾ ಮಠದ ಮಕ್ಕಳು ತಮ್ಮ ಮನೆಗಳಿಗೆ ತೆರಳಲು ಮುಂದೆ ಬರುತ್ತಿಲ್ಲ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಸ್ವಾಮೀಜಿಗಳು, ನಮ್ಮ ಮಠದಲ್ಲಿ ಸುಮಾರು ಸಾವಿರ ಮಕ್ಕಳಿದ್ದಾರೆ. ಮನೆಗೆ ಹೋಗುವ ಬಗ್ಗೆ ನಾವು ಕೇಳಿದ್ದೇವೆ. ಆದರೆ, ಯಾರೂ ಕೂಡ ಮುಂದೆ ಬರುತ್ತಿಲ್ಲ. ಎಸ್ಎಸ್ಎಲ್​​ಸಿ ಪರೀಕ್ಷೆ ಬರೆಯಬೇಕಿದ್ದ 1000 ಮಕ್ಕಳು ಮಠದಲ್ಲಿದ್ದಾರೆ. ಅವರನ್ನು ವಾಪಸ್​​ ಮನೆಗೆ ಹೋಗಿ ಎಂದು ಹೇಳಲು ಆಗುವುದಿಲ್ಲ ಎಂದರು.

ಶ್ರೀಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ..

ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದೆ. ನೀವೆಲ್ಲರೂ ಮಠದಲ್ಲಿಯೇ ಇರಬೇಕು, ಅಂತರ ಕಾಪಾಡಿಕೊಳ್ಳಬೇಕೆಂದು ತಿಳಿಸಲಾಗಿದೆ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅವರನ್ನು ಸುರಕ್ಷಿತವಾಗಿ ಆರೋಗ್ಯಪೂರ್ಣವಾಗಿ ನೋಡಿಕೊಳ್ಳಲು ಮುಂದಾಗಿದ್ದೇವೆ. ಇಡೀ ದೇಶವೇ ಲಾಕ್​​​ಡೌನ್ ಆಗಿದೆ. ಶ್ರೀ ಸಿದ್ಧಗಂಗಾ ಮಠಕ್ಕೆ ಯಾರೂ ಕೂಡ ಬರುವಂತಹ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details