ತುಮಕೂರು:ಜಿಲ್ಲೆಯ ಶಿರಾ ಪಟ್ಟಣದ ಬೇಗಂ ಮೊಹಲ್ಲಾದಲ್ಲಿ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿದೆ.
ಕಂಟೈನ್ಮೆಂಟ್ ಝೋನ್ನಿಂದ ಮುಕ್ತಿ ಪಡೆದ ಶಿರಾ: ವ್ಯಾಪಾರ ವಹಿವಾಟಿಗೆ ಅವಕಾಶ - latest tumkur, shira news
ಪಿ. 84 ಸೋಂಕಿತನ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರ ಸ್ಯಾಂಪಲ್ಗಳು ನೆಗೆಟಿವ್ ಬಂದಿರುವುದರಿಂದ ಶಿರಾ ಪಟ್ಟಣದಲ್ಲಿದ್ದ ಕಂಟೈನ್ಮೆಂಟ್ ತೆಗೆಯಲಾಗಿದೆ. ತುಮಕೂರು ನಗರದಲ್ಲಿ ಇನ್ನೂ ಎರಡು ಕಂಟೈನ್ಮೆಂಟ್ ಝೋನ್ಗಳು ಇರುವುದರಿಂದ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಈಗಾಗಲೇ ಪರೀಕ್ಷೆಗೆ ಕಳುಹಿಸಿದ್ದ ಪಿ. 84 ಸೋಂಕಿತನ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರ ಸ್ಯಾಂಪಲ್ಗಳು ನೆಗೆಟಿವ್ ಬಂದಿರುವುದರಿಂದ ಶಿರಾ ಪಟ್ಟಣದಲ್ಲಿದ್ದ ಕಂಟೈನ್ಮೆಂಟ್ ತೆಗೆಯಲಾಗಿದೆ. ತುಮಕೂರು ನಗರದಲ್ಲಿ ಇನ್ನೂ ಎರಡು ಕಂಟೈನ್ಮೆಂಟ್ ಝೋನ್ಗಳು ಇರುವುದರಿಂದ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.
ನಗದ ಪಿ. 535, ಪಿ. 591 ಸಂಪರ್ಕಿತರ 98 ಮಂದಿಯ ಸ್ಯಾಂಪಲ್ಗಳು ನೆಗೆಟಿವ್ ಬಂದಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯನ್ನು ಆರೆಂಜ್ ವಲಯವೆಂದು ಗುರುತಿಸಲಾಗಿದೆ. ಅಲ್ಲದೆ ಪೂರಕ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.