ಕರ್ನಾಟಕ

karnataka

ETV Bharat / state

ಮಾಜಿ ಪ್ರಧಾನಿ ದೇವೇಗೌಡರ ಕುರಿತು ಕಾಂಗ್ರೆಸ್ ಮುಖಂಡ ರಾಜಣ್ಣ ವಿವಾದಿತ ಹೇಳಿಕೆ - ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ವಿವಾದಿತ ಹೇಳಿಕೆ

ತುಮಕೂರಿನ ಕಾಂಗ್ರೆಸ್​ ಮುಖಂಡ ಕೆ.ಎನ್.ರಾಜಣ್ಣ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರ ಮಾತುಗಳನ್ನಾಡಿ ವಿವಾದ ಸೃಷ್ಟಿಸಿದ್ದಾರೆ.

congress-leader-kn-rajanna-controversial-statement-against-hd-devegowda
ದೇವೇಗೌಡರು ಹತ್ತಿರದಲ್ಲೇ ನಾಲ್ಕರ ಮೇಲೆ ಹೋಗೋದಿದೆ:ಕಾಂಗ್ರೆಸ್ ಮುಖಂಡ ರಾಜಣ್ಣ ವಿವಾದಿತ ಹೇಳಿಕೆ

By

Published : Jul 1, 2022, 3:18 PM IST

Updated : Jul 1, 2022, 3:59 PM IST

ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​​.ಡಿ.ದೇವೇಗೌಡರ ಕುರಿತಾಗಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ದೇವೇಗೌಡರು ಇಬ್ಬರ ಭುಜದ ಮೇಲೆ ಕೈ ಹಾಕಿ ನಡೆದಾಡುವ ರೀತಿ ತೋರಿಸುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ಧಾರೆ.


ಇದು ನನ್ನ‌ ಕೊನೆಯ ಚುನಾವಣೆ. ಶೋಕಿ ಮತ್ತು ಮುಖಸ್ತುತಿಗೆ ರಾಜಕಾರಣ ಮಾಡೋದು ಬೇಡ. ನಾನು ಎಂಎಲ್ಎಯಾದರೆ, ನೀವೆಲ್ಲ (ಜನರು) ಎಂಎಲ್ಎಗಳು ಇದ್ದಂಗೆ. ಇದಕ್ಕಾಗಿ ನೀವು ಹೋರಾಟ ಮಾಡಿ. ನಾನು ಎಂಎಲ್ಎಯಾದರೆ ನಿಮ್ಮ ಕೈಗೆ ಅಧಿಕಾರ ಸಿಗುತ್ತದೆ. ನಾನು ಸುಮ್ಮನೆ ನಾಮಕಾವಾಸ್ತೆಗೆ ಇರ್ತೀನಿ. ಏನಾದರೂ ಕೆಲಸ ಆಗಬೇಕಾದರೆ ನೀವೇ ಅಧಿಕಾರಿಗಳನ್ನು ಕೇಳೋ ಶಕ್ತಿ ನಿಮಗೆ ಬರುತ್ತೆ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಮನೆ ಬಾಗಿಲಿಗೂ ಬಂದು ಮತ ಕೇಳ್ತೀನಿ. ಮುಂದೆ ನೀವು ನನ್ನನ್ನು ನಿಂತ್ಕೋ ಅಂದರೂ ಮತ್ತೆ ಚುನಾವಣೆಗೆ ನಿಲ್ಲಲ್ಲ. ನನಗೆ ಈಗಾಗಲೇ 72 ವರ್ಷ ವಯಸ್ಸಾಗಿದೆ. 77 ವರ್ಷವಾದರೆ ಕೈಕಾಲು ಅಲಾಡ್ತಿರುತ್ತೆ. ಸರ್ಕಾರ ಬಂದರೆ ನೂರಕ್ಕೆ ನೂರರಷ್ಟು ಮಂತ್ರಿ ಆಗ್ತೀನಿ ಎಂದು ಹೇಳಿದರು.

ಇದನ್ನೂ ಓದಿ:ಪಂಚಮಸಾಲಿ ಮೂರನೇ ಪೀಠ ನಿರಾಣಿಗೆ ಮಾತ್ರ ಸೀಮಿತವಲ್ಲ: ಸಂಗನಬಸವ ಸ್ವಾಮೀಜಿ

Last Updated : Jul 1, 2022, 3:59 PM IST

ABOUT THE AUTHOR

...view details