ತುಮಕೂರು :ರಾಜ್ಯದಲ್ಲಿ ಅಕ್ರಮ ಗಣಿಕಾರಿಕೆ ನಡೆಯುತ್ತಿರುವ ಬಗ್ಗೆ ಎಲ್ಲಾ ಜಿಲ್ಲೆಗಳಿಂದಲೂ ದೂರು ಬರುತ್ತಿವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮರಳು, ಜಲ್ಲಿ ಎಲ್ಲರಿಗೂ ಬೇಕಾಗಿದೆ. ಕಾನೂನು ಬದ್ಧವಾಗಿ ಎಲ್ಲರಿಗೂ ಸಿಗಬೇಕು.
ಈ ಕುರಿತಂತೆ ಸಭೆ ನಡೆಸಿ ಎಲ್ಲೆಲ್ಲಿ ನ್ಯೂನ್ಯತೆ ಇದೆ ಅದನ್ನು ಸರಿ ಮಾಡಿ ಕಾನೂನು ಚೌಕಟ್ಟಿನಲ್ಲಿ ಸಕ್ರಮ ಮಾಡಬೇಕೆಂಬ ಎಚ್ಚರಿಕೆ ನೀಡಲಾಗುವುದು ಎಂದರು. ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಸಣ್ಣದಾಗಿ ದರ ನಿಗದಿಪಡಿಸಿ ಮರಳನ್ನು ಎತ್ತಿನಗಾಡಿಯಲ್ಲಿ ಸ್ವಂತಕ್ಕೆ ಉಪಯೋಗಿಸಿದ್ರೆ ಯಾವುದೇ ತೊಂದರೆ ಇಲ್ಲ.
ಮರಳನ್ನು ಉಚಿತವಾಗಿ ಬಳಕೆ ಮಾಡೋಕೆ ಕಾನೂನು ತರುತ್ತಿದ್ದೇವೆ. ಒಂದೆಡೆ ಶೇಖರಿಸಿ ಟಿಪ್ಪರ್ ಮುಖಾಂತರ ಹೊರಗಡೆ ಸಾಗಿಸಿದ್ರೆ ಅದಕ್ಕೆ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.