ಪಾವಗಡ (ತುಮಕೂರು): ವಿಶ್ವದ ಬೃಹತ್ ಸೌರವಿದ್ಯುತ್ ಘಟಕದಲ್ಲಿನ ಸಿಎಸ್‍ಆರ್ ಹಣವನ್ನು ಬಳಸಿಕೊಂಡು ಪ್ರತಿ ಕಂಪನಿಯೂ ಕೂಡ ಆಯ್ದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅಭಿವೃದ್ಧಿಪಡಿಸಬೇಕು ಎಂದು ಸಂಸದ ನಾರಾಯಣಸ್ವಾಮಿ ಕಂಪನಿಗಳಿಗೆ ಕರೆ ನೀಡಿದ್ದಾರೆ.
ಸೋಲಾರ್ ಕಂಪನಿಗಳು ಸಿಎಸ್‍ಆರ್ ಹಣ ಬಳಸಿಕೊಂಡು ಶಾಲೆಗಳ ಅಭಿವೃದ್ಧಿ ಮಾಡಬೇಕು: ಸಂಸದ - MP Narayanaswamy pressmeet
ಪಾವಗಡ ತಾಲೂಕಿನಲ್ಲಿ ರೆನ್ಯೂಪವರ್, ಪೋರ್ಟಂ, ಟಾಟಾ, ಅದಾನಿ, ಹ್ಯಾಟ್ಮಿ, ಸಾಪ್ಟ್ ಬ್ಯಾಂಕ್‍ಯನರ್ಜಿ, ಯುರೋ, ಅವಾಡ ಸೇರಿದಂತೆ 9 ಕಂಪನಿಗಳ ಜೊತೆ ಸಂಸದ ನಾರಾಯಣಸ್ವಾಮಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಲಾರ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ತಾಲೂಕಿನಲ್ಲಿ ರೆನ್ಯೂಪವರ್,ಪೋರ್ಟಂ, ಟಾಟಾ, ಅದಾನಿ, ಹ್ಯಾಟ್ಮಿ, ಸಾಪ್ಟ್ ಬ್ಯಾಂಕ್‍ಯನರ್ಜಿ, ಯುರೋ, ಅವಾಡ ಸೇರಿದಂತೆ 9 ಕಂಪನಿಗಳಿಂದ ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ತಮ್ಮ ಬಳಿಯ ಸಿಆರ್‍ಎಸ್ ಅನುದಾನದಲ್ಲಿ ತಿರುಮಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ತಿಳಿಸಿದರು.
ಶಾಲೆಗಳನ್ನು ದತ್ತು ಪಡೆದ ನಂತರ ಮುಂದಿನ ಅಭಿವೃದ್ಧಿಗಾಗಿ ಡಿಡಿಪಿಐ ಅವರಿಂದ ಆದೇಶದ ಪ್ರತಿ ಕೊಡಿಸಲಾಗುವುದು ಎಂದು ಇದೇ ವೇಳೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ರು.